ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಾಪಂ ಆಡಳಿತಾಧಿಕಾರಿಗಳು ಯಾರು ? ಇಲ್ಲಿವರೆಗೆ ಏನೇನಾಯ್ತು ?

ಕುಂದಗೋಳ : ತಾಲೂಕು ಪಂಚಾಯಿತಿ ಸದಸ್ಯರ ಅಧಿಕಾರಧಿ ಮುಗಿದು ಪುನಃ ತಾಪಂ ಆಡಳಿತಕ್ಕೆ ಇಬ್ಬರೂ ಆಡಳಿತಾಧಿಕಾರಿ ನೇಮಕವಾದರೂ ಗ್ರಾಮ ಗ್ರಾಮಗಳ ಅಭಿವೃದ್ಧಿ ಮರಿಚೀಕೆ ಆಗುತ್ತಿವೆ ಎಂಬ ಮಾತು ಜನಸಾಮಾನ್ಯ ವಲಯದಿಂದ ಕೇಳಿ ಬರುತ್ತಿವೆ.

ಹೌದು ! ಈಗಾಗಲೇ ತಾಪಂ ಕಚೇರಿಗೆ ಕಳೆದ ಜೂನ್ 1 ರಂದು ಆಡಾಳಿತಾಧಿಕಾರಿಯಾಗಿ ದೊಡ್ಡ ಬಸವರಾಜ ನೇಮಕವಾಗಿ ಕರ್ತವ್ಯ ನಿರ್ವಹಿಸಿ, ಮರಳಿದ ಮೇಲೆ ಅದೇ ಜಾಗಕ್ಕೆ ನೂತನ ಆಡಾತಾಧಿಕಾರಿಆಯಾಗಿ ಪ್ರಸಕ್ತ ವರ್ಷ ಜನೇವರಿ 12 ರಂದು ಕೆ‌.ಎನ್.ಸಿದ್ಧಪ್ಪ ಅವರು ನೇಮಕವಾದರೂ ಇವರ ಕೊಠಡಿ ಎಲ್ಲಿದೆ ಎಂಬ ಮಾಹಿತಿ ನಾಮಫಲಕ ಕಚೇರಿಯಲ್ಲಿ ಇಲ್ಲಾ.

ಮುಖ್ಯವಾಗಿ ತಾಪಂ ಕಚೇರಿಯ ಅಧಿಕಾರಿ ಸಿಬ್ಬಂದಿಗಳೇ ಆಡಳಿತಾಧಿಕಾರಿ ಯಾರು ಎಂದ್ರೇ ? ದಾಖಲೆ ತೆಗೆದು ನೋಡಿ ಹೇಳ್ತಾರೆ ಅಷ್ಟರ ಮಟ್ಟಿಗೆ ತಾಪಂ ಕಚೇರಿ ವಾತಾವರಣವಿದೆ.

ಇನ್ನೂ ತಾಪಂ ಕಚೇರಿಯಲ್ಲಿ ಇಲ್ಲಿವರೆಗೆ 5 ಸಾಮಾನ್ಯಸಭೆ, ಒಂದು ಕೆಡಿಪಿ ಸಭೆ ಕರೆಯಲಾಗಿದೆ. ಆದ್ರೇ ಯಾವ ಆ ಸಭೆಯಲ್ಲಿ ಏನು ಚರ್ಚೆ ಆಗಿದೆ ? ಆಡಳಿತಾಧಿಕಾರಿ ಯಾವ ಯಾವ ಗ್ರಾಮಕ್ಕೆ ಭೇಟಿ ಕೊಟ್ಟಿದ್ದಾರೆ ? ಯಾವಾಗ ಬರ್ತಾರೆ ? ಎಂದ್ರೇ ಸರ್ ಅವರು ಧಾರಾವಾಡದಲ್ಲಿ ಇರ್ತಾರೆ ನೇರ ಹಳ್ಳಿಗೆ ಭೇಟಿ ಕೊಡ್ತಾರೆ ಎಂತಾರೇ ತಾಪಂ ಸಿಬ್ಬಂದಿಗಳು ಹಾಗಾದ್ರೇ ಆ ಹಳ್ಳಿ ಯಾವುವು ? ಎಂಬ ಪ್ರಶ್ನೆಗೆ ಉತ್ತರ ವಿಲ್ಲಾ.

ಒಟ್ಟಾರೆ 26 ಗ್ರಾಮ ಪಂಚಾಯಿತಿಗಳನ್ನು ಅಭಿವೃದ್ಧಿ ವಿಚಾರದಲ್ಲಿ ಮುನ್ನಡೆಸಬೇಕಾದ ತಾಪಂ ಅಧಿಕಾರಿ, ಸಿಬ್ಬಂದಿಗಳು ಜಾಣ ಕುರುಡು ವರ್ತನೆಗೆ ಜಾರಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

03/03/2022 09:24 am

Cinque Terre

73.52 K

Cinque Terre

0

ಸಂಬಂಧಿತ ಸುದ್ದಿ