ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ನಂ.39ರ ಗುರುನಾಥ ನಗರದಲ್ಲಿ ಸಮಸ್ಯೆಗಳ ಆಗರ

ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿ. ಅಲ್ಲಿನ ರಸ್ತೆ ಅವ್ಯವಸ್ಥೆ ಹಾಗೂ ಯಡವಟ್ಟು ಕಾಮಗಾರಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಅದರಂತೆ ಈಗ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಹೇಗಿದೆ ಎಂಬುದನ್ನು ತೋರಿಸ್ತೀವಿ ನೋಡಿ...

ಹೌದು..ವಾರ್ಡ್ ನಂಬರ್ 39ರಲ್ಲಿ ಬರುವ ಗುರುನಾಥ ನಗರದಲ್ಲಿ ಸುಮಾರು ವರ್ಷಗಳಿಂದ ರಸ್ತೆ ಇಲ್ಲದೇ ಇಲ್ಲಿನ ಜನರು ಭಯದಲ್ಲೇ ಓಡಾಡುತ್ತಿದ್ದಾರೆ. ಇನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಈ ನಗರದಲ್ಲಿ ಕೆಲವು ತಿಂಗಳ ಹಿಂದೆ ಚರಂಡಿ ಬ್ಲಾಕ್ ಆಗಿರುವುದನ್ನು ಗಮನಿಸಿ, ಚರಂಡಿ ಸಮಸ್ಯೆ ಬಗೆಹರಿಸುವ ಭರದಲ್ಲಿ ಗಟಾರ್ ಬ್ಲಾಕ್ ಮಾಡಿ ಕಾಮಗಾರಿ ಮುಗಿಸಿದ್ದಾರೆ. ಸದ್ಯ ಗಟಾರ್ ಬ್ಲಾಕ್ ಆಗಿದ್ದರಿಂದ ಮಳೆ ಬಂದರೆ ಸಾಕು, ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗುತ್ತಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಇನ್ನು ಗುರುನಾಥನಗರದಲ್ಲಿನ ಉದ್ಯಾನವನದ ಕತೆ ಹೇಳುವುದೇ ಬೇಡ. ಅಂತಹ ಪರಿಸ್ಥಿತಿಗೆ ತಂದು ಇಟ್ಟಿದ್ದಾರೆ ಅಧಿಕಾರಿಗಳು. ಕಳೆದ ಎರಡೂ ವರ್ಷದಿಂದ ಕಾಮಗಾರಿ ಆರಂಭಿಸಿ ಈಗ ಎಲ್ಲವೂ ಅರ್ಧ ಮಾಡಿ ಕೈ ಬಿಟ್ಟಿದ್ದಾರೆ. ಇಲ್ಲಿನ ಜನರು ಶಾಸಕ ಅರವಿಂದ ಬೆಲ್ಲದ ಅವರಿಗೆ ಹಾಗು ಸಂಬಂಧಿಸಿದ ಅಧಿಕಾರಿಗಳಿಗೆ ಅದೆಷ್ಟೋ ಬಾರಿ ಸಮಸ್ಯೆ ಬಗ್ಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಆದ್ದರಿಂದ ಈಗ ಹೋರಾಟದ ಎಚ್ಚರಿಕೆ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿ ಜನರಿಗೆ ಅದೇನು ಶಾಪವೋ ಗೊತ್ತಿಲ್ಲ, ಇಂತಹ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಅಧಿಕಾರಿಗಳು ಇರುವ ತನಕ, ಹುಬ್ಬಳ್ಳಿ ರಸ್ತೆ ಸುಸಜ್ಜಿತವಾಆಗುವ ಸಾಧ್ಯತೆ ಕಡಿಮೆ. ಆದ್ದರಿಂದ ನೂತನ ಪಾಲಿಕೆ ಸದಸ್ಯರು ಇತ್ತ ಗಮನಿಸಿ ಸಮಸ್ಯೆಗಳನ್ನು ಬಗೆ ಹರಿಸಬೇಕಾಗಿದೆ‌.....

ಈರಣ್ಣ ವಾಲಿಕಾರ,

ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Nagesh Gaonkar
Kshetra Samachara

Kshetra Samachara

19/02/2022 08:15 am

Cinque Terre

21.8 K

Cinque Terre

0

ಸಂಬಂಧಿತ ಸುದ್ದಿ