ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪತ್ರಿಕಾ ವಿತರಕರ ಪ್ರಾಧಿಕಾರ ರಚನೆಗಾಗಿ ಸಿಎಂಗೆ ಮೋರೆ

ಕುಂದಗೋಳ : ಪತ್ರಿಕಾ ರಂಗದ ಅವಿಭಾಜ್ಯ ಅಂಗವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಿಕಾ ವಿತರಕರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಅವರು ಮೂಲಕ ಮುಖ್ಯಮಂತ್ರಿ ಅವರಿಗೆ ಕುಂದಗೋಳ ತಾಲೂಕ ಪತ್ರಕರ್ತರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಪತ್ರಕರ್ತ ಅಶೋಕ್ ಘೋರ್ಪಡೆ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಪತ್ರಿಕಾ ವಿತರಕರ ಹಿತ ದೃಷ್ಟಿಯಿಂದ ತಮ್ಮ ಸರ್ಕಾರದ ಆಯವ್ಯಯದಲ್ಲಿ 2 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದ್ದರು, ಆದರೆ ಆತ ಅನುದಾನ ಬಳಕೆಯಾಗಿಲ್ಲ, ಮರಳಿ ಹಣ ಸರ್ಕಾರದ ಖಾತೆಗೆ ಜಮಾ ಆಗಿದ್ದು ವಿಷಾದಕರ ಸಂಗತಿಯಾಗಿದೆ.

ಈ ಕಾರಣ ಪ್ರಸಕ್ತ ವರ್ಷದಲ್ಲಿ ಮುಖ್ಯಮಂತ್ರಿಗಳು ಮಂಡಿಸುವ ಬಜೆಟನಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗಾಗಿ ಪ್ರತಿ ಜಿಲ್ಲೆಗೆ 1 ಕೋಟಿ ರೂಪಾಯಿ ಮೀಸಲಿಟ್ಟು ಪತ್ರಿಕಾ ವಿತರಕರ ಪ್ರಾಧಿಕಾರ ರಚನೆ ಮಾಡಿ ಕಾರ್ಮಿಕರ ಅನುಕೂಲ ಮಾಡಿಕೊಡುವಂತೆ ಅವರು ಮನವಿ ಸಲ್ಲಿಸಿದರು.

Edited By : Nagesh Gaonkar
Kshetra Samachara

Kshetra Samachara

04/02/2022 04:15 pm

Cinque Terre

14.45 K

Cinque Terre

0

ಸಂಬಂಧಿತ ಸುದ್ದಿ