This is a modal window.
Beginning of dialog window. Escape will cancel and close the window.
End of dialog window.
ಧಾರವಾಡ: ಶಾಶ್ವತ ಅಂಗನವಾಡಿ ಕಟ್ಟಡಕ್ಕಾಗಿ ಆಗ್ರಹಿಸಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯೊಬ್ಬರು ರಸ್ತೆಯಲ್ಲೇ ಕುಳಿತು ಮಕ್ಕಳಿಗೆ ಪಾಠ ಮಾಡಿದ ಘಟನೆ ನಡೆದಿದೆ.
ಹೆಬ್ಬಳ್ಳಿ ಗ್ರಾಮದ ಶಿವಾಜಿ ವೃತ್ತದ ಬಳಿ ಶಿಕ್ಷಕಿ ಮಕ್ಕಳ ಸಮೇತ ಧರಣಿ ನಡೆಸಿದರು. ಗ್ರಾಮದ 12ನೇ ಅಂಗನವಾಡಿ ಕೇಂದ್ರ ಹಳೆಯದಾಗಿದ್ದರಿಂದ ಅದರ ದುರಸ್ಥಿಗಾಗಿ ಗ್ರಾಮ ಪಂಚಾಯ್ತಿಯವರು ಎರಡೂವರೆ ವರ್ಷಗಳ ಹಿಂದೆಯೇ ಅದನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಆದರೆ, ಇನ್ನೂ ಆ ಕೇಂದ್ರ ದುರಸ್ಥಿಯಾಗಿಲ್ಲ. ಅಂಗನವಾಡಿಗೆ 30 ರಿಂದ 35 ಮಕ್ಕಳು ಬರುತ್ತಾರೆ. ಹೀಗಾಗಿ ಅಂಗನವಾಡಿಯನ್ನು ಬಾಡಿಗೆ ಮನೆಯಲ್ಲಿ ನಡೆಸಲಾಗುತ್ತಿದೆ. ಸರ್ಕಾರ ಅದರ ಬಾಡಿಗೆ ಕೂಡ ನೀಡುತ್ತಿಲ್ಲ. ಆದ್ದರಿಂದ ಕೂಡಲೇ ಸ್ವಂತ ಹಾಗೂ ಶಾಶ್ವತ ಕಟ್ಟಡ ನೀಡಬೇಕು ಎಂದು ಶಿಕ್ಷಕಿ ಆಗ್ರಹಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪಿಡಿಓ ಹಾಗೂ ಗ್ರಾಪಂ ಅಧ್ಯಕ್ಷೆ, ಗ್ರಾಮದ ಅಂಬೇಡ್ಕರ್ ಭವನದಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಲಿಖಿತ ರೂಪದ ಭರವಸೆ ನೀಡಿದ್ದರಿಂದ ಶಿಕ್ಷಕಿ ಧರಣಿ ಕೈಬಿಟ್ಟರು.
Kshetra Samachara
03/12/2021 10:51 am