ಕುಂದಗೋಳ : ಹರ್ಲಾಪೂರ ಗ್ರಾಮಕ್ಕೆ ಭೇಟಿ ನೀಡಲು ಹೊರಟ ಜಿಲ್ಲಾಧಿಕಾರಿಗಳ ವಾಹನ ತಡೆದು ತಮ್ಮ ಸಮಸ್ಯೆ ಹೇಳಿಕೊಳ್ಳಲು ಹೋಗಿ ಜಿಲ್ಲಾಧಿಕಾರಿಗಳ ಅಂಗರಕ್ಷಕರಿಂದ ಹಲ್ಲೆಯಾಗಿದೆ ಎಂಬ ಆರೋಪ ಮಾಡಿದ್ದ ಗುಡಗೇರಿ ಗ್ರಾಮದ ಅಂಬೇಡ್ಕರ್ ಕಾಲೋನಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಸಮಾಲೋಚನೆ ನಡೆಸಿದೆ.
ಗುಡಗೇರಿಗೆ ಭೇಟಿ ನೀಡಿದ ಜಿಲ್ಲಾ ಗ್ರಾಮೀಣ ಡಿವೈಎಸ್ಪಿ, ತಹಶೀಲ್ದಾರ, ಕುಂದಗೋಳ ಸಿಪಿಐ ಅಂಬೇಡ್ಕರ್ ಕಾಲೋನಿಯಲ್ಲಿ ಹಾನಿಗೊಳಗಾದ ಪ್ರತಿಯೊಂದು ಮನೆಗಳನ್ನು ವೀಕ್ಷಿಸಿ ಸರ್ಕಾರದಿಂದ ಅಗತ್ಯ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಬಳಿಕ ಜಿಲ್ಲಾಧಿಕಾರಿಗಳ ಅಂಗರಕ್ಷಕರು ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಅಂಬೇಡ್ಕರ ಕಾಲೋನಿ ಜನತೆ ಜೊತೆ ಸಮಾಲೋಚನೆ ನಡೆಸಿ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಸಹ ನೀಡಿದರು.
ಈ ವೇಳೆ ಸಮಾಜಕಲ್ಯಾಣ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸಹ ಹಾಜರಿದ್ದು, ಪ್ರಕರಣದ ವರದಿ ಪಡೆದು ಹಾನಿಯಾದ ಸ್ಥಳಗಳ ಮಾಹಿತಿ ಕಲೆ ಹಾಕಿದರು. ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ತಮ್ಮ ಕಾಲೋನಿಗೆ ಸಮರ್ಪಕ ಕಾಂಕ್ರೀಟ್ ರಸ್ತೆ, ಸಾರ್ವಜನಿಕರ ಶೌಚಾಲಯ, ಸುವ್ಯವಸ್ಥಿತ ನೀರಿನ ವ್ಯವಸ್ಥೆ, ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳ ಬೇಡಿಕೆಯನ್ನು ಅಧಿಕಾರಿಗಳ ವರ್ಗಕ್ಕೆ ಇಟ್ಟರು.
ಗುಡಗೇರಿ ಗ್ರಾಮ ಪಂಸಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಅಹವಾಲು ಸ್ವೀಕರಿಸಿದ್ರೇ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ತಾಪಂ ಅಧಿಕಾರಿ ಮಹೇಶ್ ಕುರಿಯವರು ವಿವಿಧ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
Kshetra Samachara
24/11/2021 01:47 pm