ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಬ್ಬಂದಿ ಮೇಲೆ ಸಾರಿಗೆ ಸಂಸ್ಥೆ ತಾರತಮ್ಯ: ಮುಷ್ಕರವನ್ನು ಬಂಡವಾಳ ಮಾಡಿಕೊಂಡ ಅಧಿಕಾರಿಗಳು...!

ಹುಬ್ಬಳ್ಳಿ: ಅವರೆಲ್ಲ ಕಳೆದ ಹತ್ತಾರು ವರ್ಷಗಳಿಂದ ಸಾಮಾಜಿಕ‌ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡವರು. ಆದರೆ ತಮಗೆ ಸಿಗಬೇಕಾದ ಸೌಲಭ್ಯಗಳಿಗಾಗಿ ಸರ್ಕಾರದ ವಿರುದ್ಧ ಸಿಡಿದೆದ್ದು ನಿಂತಿದ್ದ ಆ ನೌಕರರಿಗೆ ಇನ್ನೂ ಆ ಮುಷ್ಕರದಿಂದ‌ ಮುಕ್ತಿ ಸಿಕ್ಕಿಲ್ಲ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ತಮಗೆ ಸಿಗಬೇಕಾದ ಸೌಲಭ್ಯಗಳು ನಮಗೆ ದೊರಕಬೇಕು ಎಂಬ ಹಠದೊಂದಿಗೆ ರಾಜ್ಯ ಸರ್ಕಾರ ಹಾಗೂ ಸಾರಿಗೆ ಇಲಾಖೆಯ ವಿರುದ್ಧ ಮುಷ್ಕರ ಹೂಡಿದ್ದ ನೌಕರರಿಗೆ ಇನ್ನೂ ಮುಷ್ಕರದಿಂದ ಮುಕ್ತಿ ಸಿಕ್ಕಿಲ್ಲ.‌ ಕಳೆದ ಏಪ್ರಿಲ್ ತಿಂಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ‌ ಸಿಬ್ಬಂದಿ ಕರ್ತವ್ಯವನ್ನು ಮೊಟಕುಗೊಳಿಸಿ ಸರ್ಕಾರ ಹಾಗೂ ಇಲಾಖೆ ವಿರುದ್ಧ ದಂಗೆ ಎದ್ದಿದ್ದರು. ಹೀಗಾಗಿ ಎಲ್ಲ ಸಿಬ್ಬಂದಿಗಳನ್ನು ವಜಾ ಮಾಡಿ ಸರ್ಕಾರ ಆದೇಶ ಮಾಡಿತ್ತು. ನಂತರ ಆ ಎಲ್ಲ ಸಿಬ್ಬಂದಿಗಳನ್ನು ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ಎನ್.ಡಬ್ಲೂ. ಕೆ.ಆರ್.ಟಿ.ಸಿ ವ್ಯಾಪ್ತಿಯ ಇನ್ನೂ 300 ಕ್ಕೂ ಅಧಿಕ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳದೇ, ಕೆಲ ಸಿಬ್ಬಂದಿಗಳನ್ನು ವರ್ಗಾವಣೆ ಕೂಡಾ ಮಾಡಿ ತಾರತಮ್ಯವನ್ನು ಮಾಡಲಾಗಿದೆ.

ಒಟ್ಟಾರೆ ತಮಗೆ ಸಿಗಬೇಕಾದ ಸೌಲಭ್ಯಗಳಿಂದಾಗಿ ವಂಚಿತಗೊಂಡಿದ್ದ ಸಾರಿಗೆ ಸಿಬ್ಬಂದಿ ಸರ್ಕಾರದ ವಿರುದ್ದ ಏನೋ ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ತೊಡೆತಟ್ಟಿ ನಿಂತಿದ್ದು ನಿಜ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಇಲಾಖೆ ಸಿಬ್ಬಂದಿಗಳ ವಿರುದ್ದ ಕೈಗೊಳ್ಳಲಾಗಿದ್ದ ಈ ಕ್ರಮವನ್ನು ಮಾನವೀಯತೆ ದೃಷ್ಠಿಯಿಂದ ಆದರೂ ಹಿಂಪಡೆದು ಆ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ಹಾಜರಿಪಡಿಸಿಕೊಳ್ಳುವ ಮೂಲಕ ಅವರ ಜೀವನ ಸಾಕಾರಗೊಳಿಸಬೇಕಿದೆ

-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

12/11/2021 03:49 pm

Cinque Terre

25.36 K

Cinque Terre

2

ಸಂಬಂಧಿತ ಸುದ್ದಿ