ಧಾರವಾಡ: ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ನೋಟಿಸ್ ಬೋರ್ಡ್ ನಲ್ಲಿ ಅಂಟಿಸದೆ ಇರುವುದು ಹಾಗೂ ಅಲ್ಲಿನ ಕೆಲ ಅಧಿಕಾರಿಗಳು ಗೋಲ್ಮಾಲ್ ನಡೆಸುತ್ತಿರುವ ಆರೋಪದ ಬಗ್ಗೆ 'ಪಬ್ಲಿಕ್ ನೆಕ್ಸ್ಟ್' ಈ ಹಿಂದೆ ವರದಿ ಮಾಡಿತ್ತು. ಅಲ್ಲದೇ ಈ ಬಗ್ಗೆ ಮಹಾನಾಯಕ ಡಾ: ಬಿ.ಆರ್ ಅಂಬೇಡ್ಕರ್ ದಲಿತ ಗುತ್ತಿಗೆದಾರರ ಸಂಘದಿಂದ ಮನವಿ ಸಲ್ಲಿಸಲಾಗಿತ್ತು.
ಇದೀಗ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಮಾಹಿತಿಯನ್ನ ಧಾರವಾಡದ ಲೋಕೋಪಯೋಗಿ ಇಲಾಖೆ ಕಚೇರಿಯ ನೋಟಿಸ್ ಬೋರ್ಡ್ ನಲ್ಲಿ ಅಂಟಿಸಲಾಗಿದೆ.'ಪಬ್ಲಿಕ್ ನೆಕ್ಸ್ಟ್' ಮಾಡಿರುವ ಸುದ್ದಿಯಿಂದ ಎಚ್ಚೆತ್ತು ಕೊಂಡಿರುವ ಅಧಿಕಾರಿಗಳು ಕಾಮಗಾರಿಯ ಮಾಹಿತಿಯನ್ನು ಸಾರ್ವಜನಿಕರಿಗೆ ಕಾಣಿಸುವಂತೆ ನೋಟಿಸ್ ಬೋರ್ಡ್ ನಲ್ಲಿ ಅಂಟಿಸಿರುವುದು ಇಂಪ್ಯಾಕ್ಟ್ ಆಗಿದೆ.
ಟೆಂಡರ್ ಮಾಹಿತಿಯನ್ನು ನೋಟಿಸ್ ಬೋರ್ಡಿಗೆ ಅಂಟಿಸಬೇಕೆಂದು ನಾವು ಈ ಹಿಂದೆ ಮನವಿ ಸಲ್ಲಿಸಿದ್ದೆವು. ಎರಡು ವರ್ಷಗಳ ನಂತರ ಈಗ ನೋಟಿಸ್ ಬೋರ್ಡಿಗೆ ಅಂಟಿಸಲಾಗಿದೆ. ಈ ಸಂದರ್ಭದಲ್ಲಿ 'ಪಬ್ಲಿಕ್ ನೆಕ್ಸ್ಟ್'ಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ಇದೇ ರೀತಿ ಧಾರವಾಡ ಜಿಲ್ಲೆಯ ಎಲ್ಲ ತಾಲೂಕಿನ ಟೆಂಡರ್‌ಗಳನ್ನು ನೋಟಿಸ್ ಬೋರ್ಡಿಗೆ ಅಂಟಿಸ ಬೇಕು ಎಂದು ಅಧಿಕಾರಿಗಳಲ್ಲಿ ಕೇಳಿಕೊಳ್ಳುತ್ತೇವೆ.ಎಂದು ಮಹಾನಾಯಕ ಡಾ: ಬಿ.ಆರ್.ಅಂಬೇಡ್ಕರ್ ದಲಿತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಏಳಗುಡ್ಡರವರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
Kshetra Samachara
30/10/2021 03:42 pm