ಕುಂದಗೋಳ : ಪಟ್ಟಣದ ತಹಶೀಲ್ದಾರ ಕಚೇರಿಗೆ ಈ ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಬಂದ್ರೇ ತಲೆ ಒಡೆದುಕೊಂಡು ಹೋಗುವ ಅನಿವಾರ್ಯ ಸ್ಥಿತಿಯನ್ನು ಈ ತಾಲೂಕು ಕಚೇರಿ ಶೀಥಿಲಾವಸ್ಥೆ ಹಳೇ ಕಟ್ಟಡ ಜನರಿಗೆ ತಂದೊಡ್ಡಿದೆ.
ಈ ಕಚೇರಿ ಕಂಬಗಳ ಮೇಲಿನ ಸಿಮೇಂಟ್ ಹೊದಿಕೆ ಶೀಥಿಲಾವಸ್ಥೆ ಹಂತ ತಲುಪಿ ಕೆಳಗೆ ಬಿಳುತ್ತಿದ್ದು, ಅಪ್ಪಿ ತಪ್ಪಿ ಜನ ಈ ಕಂಬಗಳ ಕೆಳಗೆ ನಿಂತ್ರೇ ಯಾವಾಗ ಸಿಮೇಂಟ್ ಹೊದಿಕೆ ತಲೆಗೆ ಮೇಲೆ ಬಿಳತ್ತೋ ಗೊತ್ತಿಲ್ಲಾ ಬಿಡಿ. ನಿತ್ಯ ಜನ ಇದೆ ಕಚೇರಿಯಲ್ಲಿ ಇದೇ ರೀತಿ ಬಿರುಕು ಬಿಟ್ಟ ಸಿಮೇಂಟ್ ಹೊದಿಕೆ ಗೊತ್ತಿಲ್ಲದೆ ನಿಂತು ಬಿಡ್ತಾರೆ ಇವ್ರು ಏನಾದ್ರೂ ಆದ್ರೆ ಯಾರು ಹೊಣೆ ?
ಈ ಬಗ್ಗೆ ತಹಶೀಲ್ದಾರನ್ನು ಕೇಳಿದ್ರೇ ಕಟ್ಟಡ ಅವ್ಯವಸ್ಥೆ ಕುರಿತು ಏನು ಹೇಳಿದ್ರೂ ನೀವೇ ಕೇಳಿ.
ನಿತ್ಯ ಕಚೇರಿಗೆ ಬರೋ ಅಕ್ಷರಸ್ಥರು ಕಂಬದ ಮೇಲೆ ಅಂಟಿಸಿದ "ಕಟ್ಟಡ ಶಿಥಿಲಾವಸ್ಥೆ ತಲುಪಿದೆ" ಎಂಬ ಬೋರ್ಡ್ ನೋಡಿ ಹಿಂದೆ ಸರಿಯಬಹುದು, ಆದ್ರೇ ಓದಲು ಬಾರದ ಹಳ್ಳಿ ವೃದ್ಧರು ಮಹಿಳೆಯರ ಪಾಡೇನು ?
ಈ ಬಗ್ಗೆ ತಾಲೂಕು ದಂಡಾಧಿಕಾರಿಗಳು ಗಮನಿಸಿ ದಯವಿಟ್ಟು ನಿಮ್ಮದೆ ಇಲಾಖೆ ಕಟ್ಟಡವನ್ನು ಸರಿಪಡಿಸಿ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
26/10/2021 08:08 pm