ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೆಹಲಿಯಿಂದ ಹುಬ್ಬಳ್ಳಿಗೆ ತಲುಪಿದ ಸುದರ್ಶನ ಭಾರತ ಪರಿಕ್ರಮ ಬ್ಲ್ಯಾಕ್ ಕ್ಯಾಟ್' ಕಾರ್ ರ‍್ಯಾಲಿ! ಕಮೀಷನರ್ ಲಾಬುರಾಮ್ ಚಾಲನೆ

ಹುಬ್ಬಳ್ಳಿ: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ, ಎನ್ ಎಸ್ ಜಿ ವತಿಯಿಂದ ಸುದರ್ಶನ ಭಾರತ ಪರಿಕ್ರಮ ಬ್ಲ್ಯಾಕ್ ಕ್ಯಾಟ್' ಕಾರ್ ರ‍್ಯಾಲಿ ದೇಹಲಿಯಿಂದ ಹುಬ್ಬಳ್ಳಿಗೆ ತಲುಪಿದ್ದು, ಇಲ್ಲಿಂದ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಲಾಬುರಾಮ್ ಚಾಲನೆ ನೀಡಿದರು.

ಎನ್.ಎಸ್.ಜಿ ಯು ಅಕ್ಟೋಬರ್ 2 ರಂದು ದೆಹಲಿಯಿಂದ ಆರಂಭಿಸಿದ ಈ ರ‍್ಯಾಲಿ ಹುಬ್ಬಳ್ಳಿಗೆ ತಲುಪಿತು. ಇನ್ನು ಈ ರ‌್ಯಾಲಿಯಲ್ಲಿ ಒಟ್ಟು 12 ಅಧಿಕಾರಿಗಳು, 25 ಕಮಾಂಡರ್ ಗಳ ತಂಡವಾಗಿದ್ದು, 15 ಟಾಟಾ ಕಾರ್ ಗಳ ಮೂಲಕ 7500 ಕಿ.ಮೀ ಕ್ರಮಿಸಿದೆ, ಇಂದು ಈ ರ‍್ಯಾಲಿ ಹುಬ್ಬಳ್ಳಿಯಿಂದ ಮುಂಬೈಗೆ ತೆರಳುವ ಹಿನ್ನೆಲೆಯಲ್ಲಿ, ಚನ್ನಮ್ಮ ವೃತ್ತದಲ್ಲಿ ಕಾರ್ ರ‍್ಯಾಲಿಗೆ ಹಸಿರು ನಿಶಾನೆ ತೋರಿಸಿ ಪೊಲೀಸ್ ಕಮೀಷನರ್ ಚಾಲನೆ ನೀಡಿದರು.

Edited By : Shivu K
Kshetra Samachara

Kshetra Samachara

25/10/2021 10:56 am

Cinque Terre

55.66 K

Cinque Terre

7

ಸಂಬಂಧಿತ ಸುದ್ದಿ