ಹುಬ್ಬಳ್ಳಿ: ಭಾರತೀಯ ಅಂಚೆ ಸೇವೆ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಲ್ಲಿಸಿದ್ದ ಮನವಿಗೆ ಭಾರತೀಯ ಅಂಚೆಯ ಮುಖ್ಯ ವ್ಯವಸ್ಥಾಪಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಸ್‌ಡಿ ಬೆಂಗಳೂರು, ಪಿಎಸ್‌ಡಿ ಹುಬ್ಬಳ್ಳಿ ಮತ್ತು ಪಿಎಸ್‌ಡಿ ಅರಸಿಕೇರಿ ಶಾಖೆಗಳನ್ನು ಒಂದೇ ಪಿಎಸ್‌ಡಿ ಆಗಿ ವಿಲೀನಗೊಳಿಸಲು ಸಚಿವರು ಮನವಿ ಮಾಡಿದ್ದರು. ಈ ಕುರಿತು ಮುಖ್ಯ ಅಂಚೆ ನಿರ್ದೇಶಕರು ಸಮ್ಮತಿ ಸೂಚಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
12/02/2021 06:29 pm