ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ ಕಾರ್ಯಗಳು ನಡೆಯುತ್ತಿದ್ದು, ಅದೇ ರೀತಿ ಇಲ್ಲೊಂದು ನಗರದಲ್ಲಿ ಚರಂಡಿ ಕಾಲುವೆಯ ನೆಪದಲ್ಲಿ ಅಧಿಕಾರಿಗಳು ಅಲ್ಲಿನ ನಿವಾಸಿಗಳ ಹತ್ತಿರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ...
ಹೀಗೆ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದ್ದು, ಹುಬ್ಬಳ್ಳಿಯ ನೇಕಾರನಗರದ ಸಿಂದೆ ಕಾಲೋನಿಯಲ್ಲಿ. ಇಲ್ಲಿನ ಜನರು ಸುಮಾರು 20 ವರ್ಷಗಳಿಂದ ಮನೆಯನ್ನು ಕಟ್ಟಿಕೊಂಡು ಉತ್ತಮ ಜೀವನವನ್ನು ನಡೆಸುತ್ತಿದ್ದರು. ಆದರೆ ಅಲ್ಲಿ ಹಾದು ಹೋದ ಚರಂಡಿ ನೀರಿನ ಗಟರ್ ಈಗ ಈ ಜನರಿಗೆ ತಲೆ ನೋವು ಆಗಿ ಪರಿಣಮಿಸಿದೆ. ಚರಂಡಿ ಅಗಲಿ ಕರಣ ಮಾಡಿ ಕಟ್ಟಲಾಗುತ್ತಿದೆ, ಅದ್ದರಿಂದ ನಿಮ್ಮ ಮನೆಗಳ ಖಾಲಿ ಮಾಡಿ ಇಲ್ಲವಾದರೆ 5 ಲಕ್ಷ ರೂಪಾಯಿ ಹಣ ಕೊಡಿ, ಎಂದು ಅಧಿರಯೊಬ್ಬರು ಬೇಡಿಕೆ ಇಟ್ಟಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಗಂಭೀರ ಆರೋಪ ಮಾಡುತ್ತಿದ್ದಾರೆ...
ಇನ್ನು ಇಲ್ಲಿ ವಾಸಿಸುವ ನಿವಾಸಿಗಳು ತೆರಿಗೆ ಪಾವತಿಸುತ್ತಾ ಬಂದಿದ್ದಾರೆ. ಆದ್ರೂ ಸಹ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಏಕಾಏಕಿ ಚರಂಡಿ ನೆಪವೊಡ್ಡಿ ಅಧಿಕಾರಿಗಳು ಹಣ ಬೇಡಿಕೆ ಇಟ್ಟಿರುವುದು ಎಷ್ಟರಮಟ್ಟಿಗೆ ಸರಿ ಎಂದು ಆಕ್ರೋಶಗೊಂಡಿದ್ದಾರೆ. ಅಷ್ಟೇ ಅಲ್ಲದೆ ಇದ್ದ ಜಾಗದಲ್ಲಿ ಚರಂಡಿ ಮಾಡಿದರೆ ಯಾರಿಗೂ ಸಹ ತೊಂದರೆ ಆಗುವುದಿಲ್ಲ. ಮತ್ತೆ ಅಗಲಿಕರಣ ಮಾಡುವುದಾಗಿ ಹೇಳಿ ಹಣ ಕೇಳಿರುವ ಅಧಿಕಾಯಿಂದ ಇಲ್ಲಿನ ನಿವಾಸಿಗಳನ್ನು ಇನ್ನಷ್ಟು ಸಂಕಟಕ್ಕೆ ಸಿಲಿಕಿದ್ದಾರೆ. ಅದಕ್ಕಾಗಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಹೋದ್ರೇ ನಾವೆಲ್ಲರೂ ಸೇರಿ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ..
ಒಟ್ಟಿನಲ್ಲಿ ಇಪ್ಪತ್ತು ವರ್ಷಗಳಿಂದ ಸುಖಕರ ಜೀವನ ನಡೆಸುತ್ತಿದ್ದ ನೇಕಾರ ನಹರದ ಸಿಂದೇ ಕಾಲೋನಿ ಜನತೆ ಜೀವನಕ್ಕೆ ಕೊಳ್ಳೆ ಇಡಲು ಹೊರಟಿರುವ ಅಧಿಕಾರಿಗಳ ವಿರುದ್ಧ, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಅಲ್ಲಿನ ಜನರಿಗೆ ನೆಮ್ಮದಿತ ಜೀವನ ನಡೆಸಲು ಅನುವು ಮಾಡಿ ಕೊಡಬೇಕು ಎನ್ನುವುದೇ ಎಲ್ಲರ ಆಶಯ....
Kshetra Samachara
04/02/2021 04:12 pm