ಧಾರವಾಡದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಕ್ಷರಶಃ ಮರಳಿನಲ್ಲಿ ಮುಚ್ಚಿ ಹೋಗಿದೆ.ಅರೆರೆ ಇದೇನು ಕಚೇರಿಯನ್ನು ಮರಳಿನಿಂದ ಮುಚ್ಚಿದ್ದಾರಾ? ಎಂದು ಪ್ರಶ್ನಿಸಬೇಡಿ. ಕಚೇರಿಯ ಆವರಣವೆಲ್ಲ ಮರಳಿನಿಂದ ತುಂಬಿಕೊಂಡಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಲ್ಲಿದೆ ಎಂದು ಹುಡುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಅಕ್ರಮವಾಗಿ ಸಾಗಿಸುವ ಮರಳನ್ನು ಅಧಿಕಾರಿಗಳು ವಶಪಡಿಸಿಕೊಂಡು ತಮ್ಮ ಇಲಾಖೆ ಆವರಣದಲ್ಲಿ ಅದನ್ನು ಶೇಖರಣೆ ಮಾಡಿದ್ದಾರೆ. ಹೀಗೆ ಶೇಖರಣೆ ಮಾಡುತ್ತಿರುವ ಮರಳು ದೊಡ್ಡ ಗುಡ್ಡೆಯಾಗಿ ಬೆಳೆಯುತ್ತಿದೆ. ಇದರಿಂದಾಗಿ ಕಚೇರಿ ಆವರಣದೊಳಗೆ ವಾಹನಗಳು ಹೋಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಷ್ಟೇ ಅಲ್ಲ ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಲ್ಲಿದೆ ಎಂದು ಹುಡುಕುವಂತಾಗಿದೆ. ಈ ಇಲಾಖೆಗೆ, ವಶಪಡಿಸಿಕೊಂಡ ಮರಳನ್ನು ಶೇಖರಣೆ ಮಾಡಲು ಜಾಗದ ಕೊರತೆ ಇದ್ದು, ಅದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಬೇಕಾದ ಕಾರ್ಯ ಆಗಬೇಕಿದೆ.
Kshetra Samachara
30/01/2021 10:23 am