ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಬ್ಲಿಕ್ ನೆಕ್ಸ್ಟ್ ವರದಿಯ ಬಿಗ್ ಇಂಪ್ಯಾಕ್ಟ್: ಉದ್ಘಾಟನೆಗೆ ಸಿದ್ಧವಾಗುತ್ತಿರುವ ಮಡ್ಕಿಹೊನ್ನಳ್ಳಿ ಗ್ರಾ ಪಂ ಕಟ್ಟಡ

ಕಲಘಟಗಿ:ತಾಲೂಕಿನ‌ ಮಡ್ಕಿಹೊನ್ನಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಕಟ್ಟಿ ಎಂಟು ವರ್ಷಗಳಾಗಿದ್ದರು,ಉದ್ಘಾಟನೆ ಆಗದ ಕುರಿತು ಪಬ್ಲಿಕ್ ನೆಕ್ಸ್ಟ್ "ಉದ್ಘಾಟನೆ ಭಾಗ್ಯ ಕಾಣದ ಗ್ರಾ ಪಂ‌ ಕಟ್ಟಡ" ಎಂದು ವರದಿ ಬಿತ್ತರಿಸಿದ ಬೆನ್ನಲ್ಲೇ ಗ್ರಾ ಪಂ‌ ಕಟ್ಟಡದ ಉದ್ಘಾಟನೆಗೆ ಸಿದ್ಧತೆ ಮಾಡಲಾಗುತ್ತಿದೆ.

ಜಿ ಪಂ 2011-12 ನೇ ಸಾಲಿನ ಐ ಆರ್ ಡಿ ಎಫ್ ನಬಾರ್ಡ್ ಯೋಜನೆಯಲ್ಲಿ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯತಿ ‌ಕಟ್ಟಡ ಉದ್ಘಾಟನೆಯಾಗದೇ ಪಾಳು ಬಿದ್ದಿತ್ತು,ಕಟ್ಟಡ ಹಾಳಾಗುತ್ತಿರುವ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಸ್ಥಳಕ್ಕೆ ಭೇಟಿ ನೀಡಿ ಸವಿವರವಾದ ವರದಿ ಬಿತ್ತರಿಸಿತ್ತು.

ವರದಿಯಿಂದ ಎಚ್ಚುತ್ತುಕೊಂಡ ಅಧಿಕಾರಿಗಳು ಗ್ರಾ ಪಂ ಕಟ್ಟಡದ ಸುತ್ತಲಿನ ‌ಕಸ ತೆಗೆದು ಸ್ವಚ್ಚತೆ ಮಾಡಿಸಿ, ಕಟ್ಟಡಕ್ಕೆ ಸುಣ್ಣ ಬಣ್ಣ ಹಚ್ಚಿಸುತ್ತಿದ್ದಾರೆ.ಇನ್ನೇನು ಕೆಲವೆ ದಿನಗಳಲ್ಲಿ ನೂತನ‌ ಗ್ರಾ ಪಂ ಕಟ್ಟಡ ಉದ್ಘಾಟನೆಗೊಳ್ಳಲಿದ್ದು, ಇದು ನಿಮ್ಮ ಪಬ್ಲಿಕ್ ‌ನೆಕ್ಸ್ಟ್ ವರದಿ‌ಯ ಬಿಗ್ ಇಂಪ್ಯಾಕ್ಟ್.

Edited By : Manjunath H D
Kshetra Samachara

Kshetra Samachara

18/11/2020 02:39 pm

Cinque Terre

30.11 K

Cinque Terre

5

ಸಂಬಂಧಿತ ಸುದ್ದಿ