ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ರೈತನ ಬದುಕಿಗೆ ಮುಳುವಾದ ಡ್ಯಾಮ್ ನಿರ್ಮಾಣ; ಬೆಳೆ ನೀರುಪಾಲು

ಅಣ್ಣಿಗೇರಿ: ಮಳೆರಾಯ ಯಾಕೋ ರೈತನ ಮೇಲೆ ಮುನಿಸಿಕೊಂಡಂತೆ ಕಾಣುತ್ತಿದೆ. ಅದ್ಯಾಕೋ ಏನೋ ಗೊತ್ತಿಲ್ಲ‌, ಬರಬೇಕಾದ ಸಮಯದಲ್ಲಿ ಬಾರದ ವರುಣ ದೇವ ಬೇಡದ ಸಮಯದಲ್ಲಿ ಬಿಟ್ಟು ಬಿಡದೆ ಬರುತ್ತಿದ್ದಾನೆ!

ಹೌದು... ತಾಲೂಕಿನ ಭದ್ರಾಪುರ ಗ್ರಾಮದ ಹಳ್ಳದ ಸುತ್ತಮುತ್ತ ಸುಮಾರು ನಾಲ್ಕರಿಂದ ಐದು ನೂರು ಎಕರೆ ಜಮೀನಿನಲ್ಲಿ ನೀರು ನುಗ್ಗಿದ ಪರಿಣಾಮ ಬೆಳೆಗಳೆಲ್ಲ ಹಾಳಾಗಿದೆ. ಇನ್ನೊಂದು ಕಡೆ ಅದೇ ರೈತರು ಲಕ್ಷಗಟ್ಟಲೆ ಖರ್ಚು ಮಾಡಿ ಹಾಕಿಸಿದ್ದ ಒಡ್ಡುಗಳೂ ಒಡೆದಿದೆ.

ಹಳ್ಳ ಸ್ವಲ್ಪ ಮುಂದೆ ಬಂದರೆ ಸಾಕು, ಅಕ್ಕಪಕ್ಕದ ಜಮೀನುಗಳಿಗೆ ನೀರು ಪದೇ ಪದೆ ನುಗ್ಗುತ್ತಿರುವುದರಿಂದ ಒಡ್ಡುಗಳು ಒಡೆಯುತ್ತಿವೆ ಮತ್ತು ಬೆಳೆಗಳು ನಾಶವಾಗುತ್ತಿವೆ ಎಂದು ರೈತರು "ಪಬ್ಲಿಕ್ಸ್ ನೆಕ್ಸ್ಟ್" ಜೊತೆ ನೋವು ಹಂಚಿಕೊಂಡರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2022 09:48 pm

Cinque Terre

78.91 K

Cinque Terre

0

ಸಂಬಂಧಿತ ಸುದ್ದಿ