ಕುಂದಗೋಳ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣ ಅದೆಷ್ಟೋ ಖಾತೆದಾರರಿಗೆ ಈ ಬಾರಿ ಪಾವತಿಯಾಗಿಲ್ಲ.
ಈ ಬಗ್ಗೆ ಬ್ಯಾಂಕ್ ಪಾಸ್ ಬುಕ್ ಹಿಡಿದು ಬ್ಯಾಂಕ್'ಗೆ ಅಲೆದಾಡಿದ ಜನರು ಕಾರಣ ಕೇಳಿ ಇಲಾಖೆಗೆ ಸುತ್ತಾಟ ಆರಂಭಿಸಿದ್ದಾರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ಖಾತೆಯ ಕಿಸಾನ್ ಸಮ್ಮಾನ್ ಯೋಜನೆ ಹಣ ಯಾಕೆ ? ವಿಳಂಬವಾಗಿದೆ. ಮತ್ತು ಹಣ ಬರಲು ಯಾವ ದಾಖಲೆ ನೀಡಬೇಕು? ಎಂಬುದನ್ನು ಸಹಾಯಕ ಕೃಷಿ ಅಧಿಕಾರಿ ಸದಾಶಿವ ಕಾನೂರಿ ಪಬ್ಲಿಕ್ ನೆಕ್ಸ್ಟ್ ಮೂಲಕ ರೈತರಿಗೆ ತಿಳಿಸಿದ್ದಾರೆ.
ಹೌದು ! ಈಗಾಗಲೇ ಕಿಸಾನ್ ಸಮ್ಮಾನ್ ರೈತರ ಖಾತೆ ಪರಿಶೀಲನೆಗಾಗಿ ವಿಳಂಬವಾಗಿದ್ದು, ಸೌಲಭ್ಯ ಪಡೆಯುತ್ತಿರುವ ರೈತನ ಸಂಪೂರ್ಣ ವಿವರ ಪರಿಶೀಲನೆ ಈ ಹಂತದಲ್ಲಿದೆ.
ಈ ಬಗ್ಗೆ ರೈತರು ಕಿಸಾನ್ ಸಮ್ಮಾನ್ ಹಣ ಬಾರದೇ ಇದ್ದವರು ಬ್ಯಾಂಕ್ ಪಾಸ್ ಬುಕ್, ಪಹಣಿ ಪತ್ರ, ಆಧಾರಕಾರ್ಡ್ ಪ್ರತಿಯನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ನೀಡಲು ಮನವಿ ಮಾಡಿದ್ದು, ಕಿಸಾನ್ ಸಮ್ಮಾನ್ ಸೌಲಭ್ಯ ಸರ್ಕಾರಿ ನೌಕರರು ಹಾಗೂ ಪಿಂಚಣಿ ಸೌಲಭ್ಯ ಹೊಂದಿರುವವರು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದು, ಈಗಾಗಲೇ ಸರ್ಕಾರಿ ನೌಕರರಾಗಿ ಕಿಸಾನ್ ಸಮ್ಮಾನ್ ಪಡೆದವರು ಮರಳಿ ಸರ್ಕಾರಕ್ಕೆ ಭರಿಸುವಂತೆ ಮನವಿ ಮಾಡಿದ್ದಾರೆ.
Kshetra Samachara
19/01/2022 06:01 pm