ವಾಣಿಜ್ಯನಗರಿ ಹುಬ್ಬಳ್ಳಿಯ ಜನರ ಕಷ್ಟ ಹೇಳತೀರದಾಗಿದೆ. ಸಿಟಿಯಲ್ಲಿ ಮಾತ್ರವಲ್ಲದೇ ಸಿಟಿಯ ಹೊರವಲಯದಲ್ಲಿ ಕೂಡ ವಾಹನ ಸವಾರರು ಹಾಗೂ ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿದೆ. ರಸ್ತೆಯ ಅವ್ಯವಸ್ಥೆಯಿಂದ ದಿನಕ್ಕೊಂದು ಅಪಘಾತ ಸಂಭವಿಸುತ್ತಿವೆ.
ಹೌದು.. ಹುಬ್ಬಳ್ಳಿಯ ಹೊರವಲಯದಲ್ಲಿರುವ ಗಾಮನಗಟ್ಟಿಯಿಂದ ಇಂಡಸ್ಟ್ರಿಯಲ್ ರೋಡ್ ಗೆ ಹೋಗುವ ರಸ್ತೆಯು ಕಿರಿದಾಗಿದ್ದು, ಓವರ್ ಟೇಕ್ ಮಾಡಲು ಹೋಗುವಾಗ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಇನ್ನೂ ಈ ರಸ್ತೆಯಲ್ಲಿ ಸಾಕಷ್ಟು ಅಪಘಾತ ಸಂಭವಿಸಿದರೂ ಕೂಡ ರಸ್ತೆಯ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಈಗಾಗಲೇ ಲಾರಿಗಳು ಬ್ಯಾಲೆನ್ಸ್ ಸಿಗದೇ ಕಂದಕಕ್ಕೆ ಜಾರುವುದು ಸರ್ವೇ ಸಾಮಾನ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಳಜಿ ವಹಿಸಿ ಸೂಕ್ತ ಕ್ರಮಗಳನ್ನು ಜರುಗಿಸಿ ಸಂಭವಿಸಬಹುದಾದ ಅಪಘಾತಕ್ಕೆ ಬ್ರೇಕ್ ಹಾಕುವ ಕಾರ್ಯ ಮಾಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/09/2022 01:07 pm