ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್: ಪ್ರವೀಣ ಓಂಕಾರಿ
ಧಾರವಾಡ: ಹುಂ.. ಮತ್ತೇನಂತೀರಿ ಧಾರವಾಡದ ಮಂದಿ..? ಮತ್ತ್ಯಾವ ರಸ್ತೆ ಸುದ್ದಿ ತುಗೊಂಡ ಬಂದ್ರ ಪಾ ಇವ್ರು ಅಂತೀರೇನು?
ಹಂಗೇನಿಲ್ರಿ ಒಳ್ಳೆ ಕೆಲಸಾ ಮಾಡಿದಾಗ ಅದಕ್ಕೂ ನಾವು ಪ್ರಚಾರ ಕೊಡಾಕಬೇಕಲ್ರಿ.. ಇವತ್ತ ಮುಂಜೇಲರ ಧಾರವಾಡದಿಂದ ಕಮಲಾಪುರ ಮ್ಯಾಲ ಹಾದು ಉಪ್ಪಿನ ಬೆಟಗೇರಿ ಕಡೆ ಹೋಗು ರಸ್ತೆ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ನ್ಯಾಗ ಒಂದು ಸುದ್ದಿ ಬಂದಿತ್ರಿ...
ರಸ್ತೆದಾಗ ಮೊಣಕಾಲುದ್ದ ಗುಂಡಿ ಬಿದ್ದಾವು ಅದಕ್ಕ ಕಡಿಯರ ಹಾಕ್ರಿ ಅಂತ ಒಂದು ಸುದ್ದಿ ಬರದಿದ್ವಿ. ಅದನ್ನ ನೋಡಿ ಈಗ ಆ ರಸ್ತೆಗೆ ಕಡಿ ಹಾಕು ಕೆಲಸಾ ಮಾಡಾಕತ್ತಾರ.. ಎಲ್ಲೆಲ್ಲಿ ತೆಗ್ಗ ಬಿದ್ದಾವಲ್ಲಾ ಅಲ್ಲೆಲ್ಲಾ ಕಡಿ ಹಾಕಿ ಮುಚ್ಚಾಕತ್ತಾರ..
ಈಗ ಸದ್ದೆ ಕಡಿ ಹಾಕಿ ಮುಚ್ಚತಾರಂತ ಮುಂದ ಮಳಿಗಾಲ ಮುಗದಮ್ಯಾಲ ಡಾಂಬರ್ ಹಾಕಿ ಚುಲೋ ರಸ್ತೆ ಮಾಡಿಕೊಡ್ತಾರಂತ್ರಿ. ಅಲ್ಲಿ ಕಡಿ ಹಾಕಾವ್ರನ್ನ ನಾವು ಕೇಳಿದಿವಿ. ಯಾರ ಹಾಕ ಅಂತ ಹೇಳ್ಯಾರ್ರಿ ಕಡಿ ಅಂತ.. ಶಾಸಕರ ಆಪ್ತ ಸಹಾಯಕರು ಹೇಳ್ಯಾರ್ರಿ ಅಂತ ಹೇಳಿದ್ರು.. ಇರ್ಲಿ ಮಳಿಗಾಲ ಮುಗದ ಮ್ಯಾಲರ ಚುಲೋ ರಸ್ತೆ ಮಾಡಿಕೊಡ್ರಿ ಅಂತ ನಾವು ಕೇಳಕೋತೇವಿ ನೋಡ್ರಿಪಾ.
Kshetra Samachara
15/10/2020 04:18 pm