ಹುಬ್ಬಳ್ಳಿ: ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ನಿಸರ್ಗ ಫೌಂಡೇಶನ್ ಸ್ಥಾಪಿಸಲಾಗಿದೆ. ಮನೆಗೊಂದು ಮರ, ಮರ ಬೆಳೆಸಿ, ಪರಿಸರ ಉಳಿಸಿ ಎಂಬಂತೆ ಪ್ರತಿ ಭಾನುವಾರು 25 ಸಸಿಗಳನ್ನು ನೆಡುವ ಕಾರ್ಯ ಮಾಡಲಾಗುತ್ತಿದೆ.
ಇದನ್ನು ಜೂನ್ 5 ರಂದು ಬೆಳಿಗ್ಗೆ 10.30ಕ್ಕೆ ವೀರಾಪೂರ ಓಣಿಯಲ್ಲಿಯಿಂದ ಪ್ರಾರಂಭ ಮಾಡಲಾಗುತ್ತದೆ ಎಂದು ನಿಸರ್ಗ ಫೌಂಡೇಶನ್ ಅಧ್ಯಕ್ಷ ಶಶಿಕಾಂತ ಬಿಜವಾಡ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಗೊಂದು ಮರ, ಮರ ಬೆಳೆಸಿ, ಪರಿಸರ ಉಳಿಸಿ ಹಾಗೂ ವಿದ್ಯೆಯಿಂದಲೇ ಪರಿವರ್ತನೆ ಸಾಧ್ಯ ಉಚಿತ ಮನೆ ಪಾಠ (ಟ್ಯೂಶನ್ ಕ್ಲಾಸ್) ನೊಂದಿಗೆ ಈಗಿನ ಮಕ್ಕಳಿಗೆ ವಿದ್ಯೆ ನೀಡುವ ಸಂಕಲ್ಪದೊಂದಿಗೆ ನಿಸರ್ಗ ಫೌಂಡೇಶನ್ ಎಂಬ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ ಎಂದರು.
ಅಷ್ಟೇ ಅಲ್ಲದೆ ದಿನಂಪ್ರತಿ ಕನಿಷ್ಠ 100 ಜನರಿಗೆ ಉಚಿತ ಊಟದ ವ್ಯವಸ್ಥೆ ಮಾಡುವ ಸಂಕಲ್ಪ ನಮ್ಮ ನಿಸರ್ಗ ಫೌಂಡೇಶನ್‌ನ ಧ್ಯೇಯ ಗುರಿಯಾಗಿದೆ. ನಾನು ಮತ್ತು ನನ್ನ ಸ್ನೇಹಿತ ಬಳಗ ತಿಂಗಳಿಗೊಮ್ಮೆ ಒಂದು ದಿನದ ದುಡಿಮೆಯ ದುಡ್ಡನ್ನ ಈ ನಮ್ಮ ನಿಸರ್ಗ ಫೌಂಡೇಶನ್‌ಗೆ ನೀಡಿ , ಖರ್ಚನ್ನು ನಿಭಾಯಿಸುವ ಸಂಕಲ್ಪ ಹೊಂದಿದ್ದೇವೆ , ಆರ್ಥಿಕವಾಗಿ ಹಿಂದುಳಿದ ಕಡು ಬಡವರಿಗೆ ಆರೋಗ್ಯ , ಶಿಕ್ಷಣ , ಮದುವೆ ಇತರೆ ಖರ್ಚುಗಳಿಗೆ ನಮ್ಮ ನಿಸರ್ಗ ಫೌಂಡೇಶನ್ ವತಿಯಿಂದ ಕೈಲಾದ ಮಟ್ಟಿಗೆ ಸಹಾಯ ಸಹಕಾರ ನೀಡುವ ಉದ್ದೇಶ ಹೊಂದಿದ್ದೇವೆ ಎಂದರು.
Kshetra Samachara
03/06/2022 01:29 pm