ಧಾರವಾಡ: ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಶಿಕ್ಷಕಿಯೊಬ್ಬರು ತಲೆ ಸುತ್ತು ಬಂದು ಬಿದ್ದ ಘಟನೆ ನಡೆಯಿತು.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದರು. ತಮಗೆ ಸೇವಾ ಭದ್ರತೆ ನೀಡಿ, ತಮ್ಮನ್ನು ಕಾಯಂ ಶಿಕ್ಷಕರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ದಾನೇಶ್ವರಿ ಎಂಬ ಶಿಕ್ಷಕಿ ತಲೆ ಸುತ್ತು ಬಂದು ಏಕಾಏಕಿ ಕುಸಿದು ಬಿದ್ದರು. ಈ ವೇಳೆ ಗಲಿಬಿಲಿಗೊಂಡ ಶಿಕ್ಷಕರು ಕೂಡಲೇ ಆ ಶಿಕ್ಷಕಿಯನ್ನು ಆಟೊ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
Kshetra Samachara
29/12/2021 01:56 pm