ಕಲಘಟಗಿ: ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಇಂದು ಸಾಯಂಕಾಲ ಶಾಲೆ ಬಿಟ್ಟ ನಂತರ ಬಸ್ಸಿಗಾಗಿ ಎರಡು ಗಂಟೆಗಳ ವರೆಗೆ ಕಾಯುವಂತಾಗಿತ್ತು. ಕಲಘಟಗಿಯಿಂದ ಜಿನ್ನೂರ ಹಾಗೂ ತಬಕದಹೊನ್ನಳ್ಳಿ ಮಾರ್ಗವಾಗಿ ಹೋಗುವ ಬಸ್ಸುಗಳು ಒಂದೇ ಒಂದು ಇರುವ ಕಾರಣ ಎರಡು ಬಸ್ಸಿನಷ್ಟು ಮಕ್ಕಳು ಹತ್ತುವ ಪರಿಸ್ಥಿತಿ ಬಂದೊದಗಿದ್ರಿಂದ ಸ್ಥಳ ಸಾಲದೆ ಮಕ್ಕಳು ಬಾಗಿಲಲ್ಲಿ ನೇತಾಡ ಬೇಕಾದ ದೃಶ್ಯ ಕಂಡು ಬಂತು!
ನಂತರ ವಿದ್ಯಾರ್ಥಿಗಳು ಆಕ್ರೋಶಗೊಂಡು ಬಸ್ಸುಗಳು ಇಲ್ಲದೆ ರಾಷ್ಟ್ರೀಯ ಹೆದ್ದಾರಿ ತಡೆದು, ಬಸ್ಸುಗಳನ್ನು ಬಿಡುವವರೆಗೂ ಬಸ್ಸು ಬಿಡೋದಿಲ್ಲ ಎಂದು ಪಟ್ಟು ಹಿಡಿದರು. ನಾವು ಮನೆ ಮುಟ್ಟುವುದು ಲೇಟ್ ಆಗುತ್ತೆ. ಹೋಮ್ ವರ್ಕ್ ಮಾಡೋಕೆ ಆಗೋಲ್ಲ. ಮನೆಯಲ್ಲಿ ತಂದೆ-ತಾಯಿ ಬೈತಾರೆ... ಏನು ಮಾಡಬೇಕು ಅಂತ ತಮ್ಮ ಅಳಲು ತೋಡಿಕೊಂಡರು.
ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಇತ್ತ ಕಡೆ ಗಮನ ಹರಿಸಿ ಬಡಪಾಯಿ ಮಕ್ಕಳ ಸಂಕಷ್ಟವನ್ನು ಬಗೆಹರಿಸಬೇಕಾಗಿದೆ.
ವರದಿ: ಉದಯ ಗೌಡರ, ಪಬ್ಲಿಕ್ ನೆಕ್ಟ್ಸ್ ಕಲಘಟಗಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/07/2022 08:44 am