ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸರ್ಕಾರಿ ಶಾಲೆಯ ವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ, ಮನವಿ

ನವಲಗುಂದ : ನವಲಗುಂದ ತಾಲೂಕಿನ ನಾಗನೂರ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿರುವಂತಹ ಶಿಕ್ಷಕರ ಕೊರತೆಯೊಂದಿಗೆ ಅಲ್ಲಿರುವಂತಹ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅವರು ಆಗ್ರಹಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಹೌದು ತಾಲೂಕಿನ ನಾಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ವರ್ಗಾವಣೆಯಾದ ಹಿನ್ನಲೆಯಲ್ಲಿ ಶಾಲೆಯಲ್ಲಿರುವಂತಹ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು, ಕೂಡಲೇ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಬೇಕು ಜೊತೆಗೆ ಕಳೆದ ಹದಿನಾಲ್ಕು ತಿಂಗಳುಗಳಿಂದ ವಿದ್ಯುತ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡ ಕಾರಣ ಶಾಲೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಅವರ ಬೇಜವಾಬ್ದಾರಿಯೇ ಕಾರಣ. ಈಗಾಗಲೇ ವರ್ಗಾವಣೆಯಾಗಿ ಹೋಗಿರುವಂತಹ ಹಿಂದಿನ ಪ್ರಭಾರಿ ಪ್ರಧಾನ ಗುರುಗಳಾದ ತೌಸಿಫ ಮಕಾಂದಾರ ಅವರನ್ನು ಕರ್ತವ್ಯ ಲೋಪ ಆಧಾರದ ಮೇಲೆ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಮಾಬುಸಾಬ ಯರಗುಪ್ಪಿ ಮನವಿಯಲ್ಲಿ ಒತ್ತಾಯ ಪೂರ್ವಕವಾಗಿ ಆಗ್ರಹ ಮಾಡಿದ್ದಾರೆ.

Edited By :
Kshetra Samachara

Kshetra Samachara

30/06/2022 04:52 pm

Cinque Terre

37.07 K

Cinque Terre

0

ಸಂಬಂಧಿತ ಸುದ್ದಿ