ಧಾರವಾಡ: ಧಾರವಾಡ ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡಲು ಪಾಲಿಕೆ ಅಧಿಕಾರಿಗಳು ವಿಭಿನ್ನ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಮಳೆಯಲ್ಲೇ ಬೀದಿ ನಾಟಕಗಳ ಮೂಲಕ ಸ್ವಚ್ಛತೆ ಕಾಪಾಡುವ ಬಗ್ಗೆ ತಿಳುವಳಿಕೆ ಹೇಳುತ್ತಿದ್ದಾರೆ.
ಧಾರವಾಡದ ಜಯನಗರದಲ್ಲಿ ಪ್ರಕಾಶ ಮಲ್ಲಿಗವಾಡ ಕಲಾ ತಂಡ ಹಾಗೂ ಮೊಬೈಲ್ ಮಲ್ಲ ಖ್ಯಾತಿಯ ಮಲ್ಲಪ್ಪ ಹೊಂಗಲ ಹಾಗೂ ಮಜಾ ಭಾರತ ಖ್ಯಾತಿಯ ಬಸವರಾಜ್ ಅವರು ಬೀದಿ ನಾಟಕ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಲಯ ಆಯುಕ್ತರಾದ ಫಕ್ಕಿರೇಶ ಇಂಗಳಗಿ ಹಾಗೂ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿರಿದ್ದರು
Kshetra Samachara
25/06/2022 12:25 pm