ಧಾರವಾಡ: ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಕಲಾ ಸಂಸ್ಥೆಗಳಿಗೆ ಸರ್ಕಾರ ಧನ ಸಹಾಯ ಮಾಡಬೇಕು. ಆರ್‌ಟಿಜಿಎಸ್ ನೆಪವೊಡ್ಡಿ ಯಾವ ಸಂಸ್ಥೆಯ ಅರ್ಜಿಯನ್ನೂ ತಿರಸ್ಕರಿಸಬಾರದು ಎಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕಲಾವಿದರು ಪ್ರತಿಭಟನೆ ನಡೆಸಿದರು.
ಪ್ರತಿವರ್ಷ ಸರ್ಕಾರ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸುವ ಕಲಾ ಸಂಸ್ಥೆಗಳಿಗೆ ಧನ ಸಹಾಯ ಮಾಡುತ್ತದೆ. ಈ ವರ್ಷ ಆರ್‌ಟಿಜಿಎಸ್ ನೆಪವೊಡ್ಡಿ ಕೆಲವೊಂದಿಷ್ಟು ಸಂಸ್ಥೆಗಳ ಅರ್ಜಿಗಳನ್ನು ತಿರಸ್ಕರಿಸುತ್ತಿದೆ. ಹಾಗೆ ಮಾಡಬಾರದು. ಎಲ್ಲ ಸಂಸ್ಥೆಗಳಿಗೂ ಸರ್ಕಾರ ಧನ ಸಹಾಯ ಮಾಡಬೇಕು ಹಾಗೂ ಕೊರೊನಾ ಮೂರನೇ ಅಲೆ ಮುಕ್ತಾಯದ ಹಂತಕ್ಕೆ ಬಂದಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪರವಾನಿಗಿ ನೀಡಿ ಕಲಾವಿದರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಲಂಬಾಣಿ ನೃತ್ಯ ಮಾಡಿ ಕಲಾವಿದರು ಸರ್ಕಾರದ ಗಮನಸೆಳೆಯುವ ಪ್ರಯತ್ನ ಮಾಡಿದರು.
Kshetra Samachara
04/02/2022 06:00 pm