ನವಲಗುಂದ: ನವಲಗುಂದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಈಗ ಕಿಸೆಗಳ್ಳರ ಹಾವಳಿಯಿಂದ ಆತಂಕ ಹೆಚ್ಚಾಗಿದೆ. ಒಂದರ ಮೇಲೊಂದರಂತೆ ಕಳ್ಳತನ ನಡೆಯುತ್ತಲೇ ಇದೆ. ಇಷ್ಟೆಲ್ಲಾ ಕಳ್ಳತನ ನಡೆಯುತ್ತಿದ್ದರೂ ಕಳ್ಳರು ಕೈಗೆ ಸಿಗದಂತಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಸಿಸಿ ಕ್ಯಾಮರಾಗಳು ಇಲ್ಲದಿರೋದು ಎಂಬ ಆರೋಪವಿದೆ.
ಎಸ್.ನವಲಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಸತತವಾಗಿ ಒಂದರ ಮೇಲೊಂದರಂತೆ ಸಾರ್ವಜನಿಕರ ಹಣವನ್ನು ಕದ್ದು ಖದೀಮರು ಪರಾರಿಯಾಗುತ್ತಿದ್ದಾರೆ. ಆದ್ರೆ ಕಳ್ಳರ ಹೆಡೆಮುರಿ ಕಟ್ಟೋದಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿದೆ. ಅದಕ್ಕೆ ಕಾರಣ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಇಲ್ಲಾ ಅನ್ನೋದು. ಈ ಬಗ್ಗೆ ಸಾರ್ವಜನಿಕರು ಹೇಳೋದು ಹೀಗೆ.
ಇನ್ನು ಈ ಬಗ್ಗೆ ಪೊಲೀಸ್ ಇಲಾಖೆ ಸಹ ಘಟಕ ವ್ಯವಸ್ಥಾಪಕರಿಗೆ ಸಿಸಿ ಕ್ಯಾಮರಾ ಕೂರಿಸಲು ಪತ್ರ ನೀಡಿದ್ದಾರಂತೆ. ಆದರೆ ಇದುವರೆಗೂ ಕ್ಯಾಮರಾ ಅಳವಡಿಸಲಾಗಿಲ್ಲ. ಈ ಬಗ್ಗೆ ಘಟಕ ವ್ಯವಸ್ಥಾಪಕರಾದ ಮಹೇಶ್ವರಿ ಬೈಲುಪತ್ತಾರ ಅವರಿಗೆ ನಮ್ಮ ಪ್ರತಿನಿಧಿ ಪ್ರಶ್ನಿಸಿದರೆ ಅವರು ಹೇಳಿದ್ದು ಹೀಗೆ.
ಈ ಬಗ್ಗೆ ಮೇಲಾಧಿಕಾರಿಗಳು ಸಹ ಗಮನ ಹರಿಸಬೇಕಿದೆ. ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿ, ಕರ್ತವ್ಯ ನಿರ್ವಹಿಸುವ ಪೊಲೀಸ್ ಇಲಾಖೆಗೆ ಸಹಕರಿಸಬೇಕಿದೆ. ಸಿಸಿ ಕ್ಯಾಮರಾ ಕೂರಿಸಿದ್ದೆ ಆದರೆ ಕಳ್ಳರ ಹಾವಳಿ ನಿಯಂತ್ರಣವಾಗುತ್ತೆ ಎನ್ನುವ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
05/07/2022 06:16 pm