ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಟಿತ ವಾಹನ ಶೋ ರೂಮ್. ಈ ಶೋ ರೂಮ್ ವಿರುದ್ಧ ಈಗ ಸರ್ಕಾರಿ ಆಸ್ತಿಯನ್ನು ಒತ್ತುವರಿ ಮಾಡಿಕೊಂಡ ಆರೋಪವೊಂದು ಕೇಳಿ ಬಂದಿದೆ. ಅಲ್ಲದೇ ಈ ಪ್ರಕರಣ ಕೂಡ ಕೋರ್ಟ್ ಮೆಟ್ಟಿಲೇರಿದೆ. ಹಾಗಿದ್ದರೇ ಯಾವುದು ಆ ಶೋ ರೂಮ್? ಅಲ್ಲಿ ನಡೆದಿದ್ದಾದ್ರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.
ಹೌದು. ಹುಬ್ಬಳ್ಳಿಯ ಉಣಕಲ್ ಗ್ರಾಮದ ಬಳಿ ಇರುವ ಬೆಲ್ಲದ ಶೋ ರೂಮ್ ಗಟಾರನ್ನು ಅತಿಕ್ರಮಣ ಮಾಡಿರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದೆ. ಉಣಕಲ್ ಗ್ರಾಮದ ಸರ್ವೇ ನಂ. 6/1ಬಿ2 ಹಾಗೂ 6/1ಬಿ3ರಲ್ಲಿ ಹಾದು ಹೋಗಿರುವ ಮಹಾನಗರ ಪಾಲಿಕೆಯ ಗಟಾರ ಜಾಗವನ್ನು ಬೆಲ್ಲದ ಶೋರೂಮ್‌ನವರು ಒತ್ತುವರಿ ಮಾಡಿರುವ ಬಗ್ಗೆ ಹೈಕೋರ್ಟ್‌ನಲ್ಲಿ ದೂರು ದಾಖಲಾಗಿದ್ದು, ಈ ಕುರಿತು ಹೈಕೋರ್ಟ್‌ನಿಂದ ಮಹಾನಗರ ಪಾಲಿಕೆಗೆ ನೋಟೀಸ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ದೂರು ಸಲ್ಲಿಸಿದ ಶಿವಗಿರಿ ಪ್ರದೇಶದ ಅಶೋಕ ದ್ಯಾವನಗೌಡ್ರ, ಡಿ.ಕೆ. ಕಲಬುರ್ಗಿ ಸಹಿತ ಐವರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಿದರು.
ಇನ್ನೂ ಪಾಲಿಕೆ ಆಯುಕ್ತರ ಕಚೇರಿಯಿಂದ ದೂರುದಾರರಿಗೆ ಬಂದು ಲಿಖಿತ ಅಥವಾ ಸ್ವಯಂ ಹೇಳಿಕೆ ದಾಖಲಿಸುವಂತೆ ಸೂಚಿಸಲಾಗಿತ್ತು. ಬೆಲ್ಲದ ಶೋರೂಂನ ಅಧಿಕಾರಿಗಳು ತಮ್ಮ ಹೇಳಿಕೆ ದಾಖಲಿಸಿದರು. ಉಭಯ ಪಕ್ಷಗಳ ಹೇಳಿಕೆ ಆಲಿಸಿದ ಆಯುಕ್ತ ಡಾ. ಗೋಪಾಲಕೃಷ್ಣ.
ಒಟ್ಟಿನಲ್ಲಿ ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಯಬೇಕಿದೆ. ಅಲ್ಲದೇ ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪನ್ನು ಕಾದುನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/02/2022 01:12 pm