ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್
ಈರಣ್ಣ ವಾಲಿಕಾರ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಇತಿಹಾಸ ಪ್ರಸಿದ್ದ ಮಾರುಕಟ್ಟೆವೊಂದು ಮುಂದಿನ ದಿನಗಳಲ್ಲಿ ಸ್ಮಾರ್ಟ್ ಮಾರುಕಟ್ಟೆಯಾಗಲಿದೆ. ಇದನ್ನು ಹು-ಧಾ ಮಹಾನಗರ ಪಾಲಿಕೆ ಆಯುಕ್ತರೇ ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಪಬ್ಲಿಕ್ ನೆಕ್ಟ್ ದುರ್ಗದಬೈಲ್ ಮಾರುಕಟ್ಟೆಯಲ್ಲಿನ ಸಮಸ್ಯೆಗಳ ಕುರಿತು "ದುರ್ಗದಬೈಲ್‌ನ್ನು ಆಧುನೀಕರಣಗೊಳಿಸಲು ವ್ಯಾಪಾರಸ್ಥರ ಒತ್ತಾಯ" ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿಗೆ ಸ್ಪಂದಿಸಿರುವ ಪಾಲಿಕೆ ಆಯುಕ್ತರು, ಜನತಾ ಬಜಾರ ರೀತಿಯಲ್ಲಿಯೇ ದುರ್ಗದ ಬೈಲ್ ಕೂಡ ಸ್ಮಾರ್ಟ್ ಮಾಡುವ ಚಿಂತನೆಯಿದೆ. ಅಲ್ಲಿರುವ ಸಮಸ್ಯೆಗಳು ನನ್ನ ಗಮನಕ್ಕೂ ಬಂದಿವೆ. ಈ ಬಗ್ಗೆ ಜನಪ್ರತಿನಿಧಿಗಳು, ಜನರ ಅಭಿಪ್ರಾಯ ಪಡೆದು ಮುಂದಿನ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ..
ಒಟ್ಟಿನಲ್ಲಿ ಸುಮಾರು ವರ್ಷಗಳಿಂದ ಸಮಸ್ಯೆಯ ಆಗರವಾದ ದುರ್ಗದ ಬೈಲ್ ಮಾರುಕಟ್ಟೆ ಸ್ಮಾರ್ಟ್ ಆಗಲಿದೆ. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಆರಂಭ ಮಾಡಬೇಕಾಗಿದೆ.
Kshetra Samachara
22/02/2022 06:16 pm