ಕುಂದಗೋಳ : ತಾಲೂಕಿನ ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳೆಯದಾದ ನೀರಿನ ಟ್ಯಾಂಕ್ ಶಿಥಿಲಾವಸ್ಥೆ ತಲುಪಿ ಬೀಳುವ ಹಂತದಲ್ಲಿದೆ,
ಈಗಾಗಲೇ ನೀರಿನ ಟ್ಯಾಂಕಿನ್ ಮೆಟ್ಟಿಲುಗಳು ಕುಸಿದಿದ್ದು ಕಬ್ಬಿನ ಸಳಿಗಳು ಹೊರಗಡೆ ಎದ್ದಿವೆ. ಇನ್ನು ನೀರಿನ ಟ್ಯಾಂಕ್ ಕೆಳಗೆ ವಿಪರೀತ ಕಲುಷಿತ ನೀರು ಸೇರಿ ಸಂಪೂರ್ಣ ಕೊಳಚೆ ವಾತಾವರಣ ನಿರ್ಮಾಣವಾಗಿದೆ.
ಮಕ್ಕಳು ಆ ಕಡೆ ಆಟೋಟಕ್ಕೆ ಹೋಗದಂತೆ ಕಾಯುವುದೇ ಜನರಿಗೆ ಸಮಸ್ಯೆಯಾಗಿದ್ದು, ಕೊಳಚೆ ತುಂಬಿದ ಕಾರಣ ದುರ್ವಾಸನೆ ಸ್ಥಳೀಯರಿಗೆ ಕಂಟಕವಾಗಿದೆ ಎನ್ನುತ್ತಿದ್ದು,
ಈ ಬಗ್ಗೆ ಸ್ಥಳೀಯರೆ ಪಬ್ಲಿಕ್ ನೆಕ್ಸ್ಟ್ ಗೆ ವಿಡಿಯೋ ಕಳುಹಿಸಿ ಊರಿಗೆ ನೀರಿಗೆ ಆಧಾರವಾದ ಟ್ಯಾಂಕರ್ ಸರಿಪಡಿಸಲು ಒತ್ತಾಯಿಸಿದ್ದಾರೆ.
Kshetra Samachara
19/12/2020 09:29 pm