ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಗರಿ ಪಥದಲ್ಲಿ ಸಂಚರಿಸಲಿವೆ ಎಲೆಕ್ಟ್ರಿಕ್ ಬಸ್: ಪ್ರಾಯೋಗಿಕ ಚಾಲನೆ

ಹುಬ್ಬಳ್ಳಿ: ಹು-ಧಾ ಮಹಾನಗರದ ತ್ವರಿತ ಸಾರಿಗೆ ಸೇವೆ (ಬಿಆರ್‌ಟಿಎಸ್‌) ಸಂಸ್ಥೆಯು ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಗುರುವಾರದಿಂದ ಪ್ರಾಯೋಗಿಕವಾಗಿ ಹುಬ್ಬಳ್ಳಿ–ಧಾರವಾಡ ನಡುವೆ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭಿಸಿದೆ.

ಹೌದು..‘ಇನ್ನು ಒಂದೆರಡು ದಿನಗಳ ಕಾಲ ಬಸ್‌ ಸಂಚರಿಸಲಿದೆ. ಬಸ್‌ ಬಗೆಗೆ ಅಧ್ಯಯನ ಮಾಡಲಾಗುತ್ತಿದ್ದು,ಬಸ್‌ಗೆ 1.9 ಕೋಟಿ ವೆಚ್ಚ ತಗಲುತ್ತಿದ್ದು, ಹೈದರಾಬಾದ್‌ ಮೂಲದ ಓಲೆಕ್ಟ್ರಾ ಕಂಪನಿ ಉತ್ಪಾದಿಸಿದೆ.

ಈ ಕಂಪನಿಯು ಪುಣೆಗೆ ಇಂತಹ 150 ಬಸ್‌ಗಳನ್ನು ಸರಬರಾಜು ಮಾಡಿದ್ದು, ಇಲ್ಲಿಗೂ ಒಂದು ಕಳುಹಿಸಿದೆ. ಒಮ್ಮೆ ಚಾರ್ಜ್‌ ಮಾಡಿದರೆ 250 ಕಿ.ಮೀ. ಓಡಿಸಬಹುದಾಗಿದೆ.

ಬಸ್‌ ವೆಚ್ಚ, ಓಡಾಟದ ವೇಗ, ಬಾಳಿಕೆ ಮುಂತಾದ ವಿಷಯಗಳ ಬಗೆಗೆ ಅಧಿಕಾರಿಗಳು ಅಧ್ಯಯನ ನಡೆಸಲಾಗುತ್ತಿದ್ದು, ಆ ನಂತರವಷ್ಟೇ ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ.

Edited By : Nirmala Aralikatti
Kshetra Samachara

Kshetra Samachara

11/12/2020 09:07 am

Cinque Terre

35.52 K

Cinque Terre

6

ಸಂಬಂಧಿತ ಸುದ್ದಿ