ಕಲಘಟಗಿ:ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದರು ಸಹ ತಾಲೂಕಿನಲ್ಲಿ ಬಸ್ ಗಳ ಸಂಚಾರ ಎಂದಿನಂತೆ ಇತ್ತು.
ಪಟ್ಟಣದಲ್ಲಿನ ಬಸ್ ನಿಲ್ದಾಣದಲ್ಲಿ ಧಾರವಾಡ,ಹುಬ್ಬಳ್ಳಿ ಹಾಗೂ ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರ ಇತ್ತು. ಬಂದ್ ಕರೆಗೆ ಕಲಘಟಗಿಯಲ್ಲಿ ಯಾವುದೇ ಸಂಘಟನೆಗಳು ಬೆಂಲಿಸದ ಕಾರಣ ಜನರ ಓಡಾಟ ಎಂದಿನಂತೆಯೇ ಇತ್ತು, ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು.
Kshetra Samachara
05/12/2020 02:26 pm