ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಟ್ಟ‌ಣದಲ್ಲಿ ಹದಿನೇಳು ವಾರ್ಡ್ ಗಳು:ಅಭಿವೃದ್ಧಿಯ ನೀಲನಕ್ಷೆ ರೂಪಿಸಬೇಕಿದೆ

ವರದಿ:ಮಲ್ಲಿಕಾರ್ಜುನ ಪುರದನಗೌಡರ

ಕಲಘಟಗಿ:ಪಟ್ಟಣ ಪಂಚಾಯಿತಿ ಹದಿನೇಳು ವಾರ್ಡ್ ಗಳನ್ನು ಹೊಂದಿದ್ದು, ನೂತನವಾಗಿ ಆಯ್ಕೆಯಾದ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರಿಂದ ಪಟ್ಟಣದ ಅಭಿವೃದ್ಧಿಯ ನೀಲನಕ್ಷೆ ರೂಪಿಸ ಬೇಕಿದೆ.

ಪ ಪಂ ಮರು ವಿಂಗಡಣೆಯ ನಂತರ ೧೩ ವಾರ್ಡ್ ಗಳಿಂದ, ಒಟ್ಟು ೧೭ ವಾರ್ಡ್‌ಗಳನ್ನಾಗಿ ವಿಂಗಡಿಸಲಾಗಿದೆ.ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ,ಉದ್ಯಾನವನ,ಕೆರೆಗಳ ಅಭಿವೃದ್ಧಿ, ರಸ್ತೆಗಳ ಸುಧಾರಣೆ,ಸಾರ್ವಜನಿಕ ಶೌಚಾಲಯ,ಗಟಾರ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಾಗ ಬೇಕಿದೆ.ಪ ಪಂ ಆಡಳಿತ ಬಿಗಿಯಾಗಿ, ಜನಸಾಮಾನ್ಯರ ಆಸ್ತಿ ಉತ್ತಾರ,ಅಗತ್ಯ ದಾಖಲೆಗಳ ವಿತರಣೆ ಸಮಯಕ್ಕೆ ಸರಿಯಾಗಿ ಮಾಡಿ ಜನರ ಪರದಾಟವನ್ನು ತಪ್ಪಿಸಿ ಹಾಗೂ ಪಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳ ಬೇಕಿದೆ.

ನಾಲ್ಕು ಕೋಟಿ ರೂ ವೆಚ್ಚದ 24X7 ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗದೇ ಹಾಳಾಗಿದೆ.ಅಳ್ನವಾರ ಮಾದರಿಯಲ್ಲಿ ಕಾಳಿ ನದಿ ನೀರು ಪೂರೈಸುವಂತೆ ಯೋಜನೆ ರೂಪಿಸ ಬೇಕಿದೆ.ಮೃತ್ಯುಂಜಯ ಕೆರೆಯ ಅಭಿವೃದ್ಧಿ‌ ಮಾಡ ಬೇಕಿದೆ.

ನಗರೋತ್ಥಾನದ ಕಾಂಕ್ರಿಟ್ ರಸ್ತೆ,ಗಟಾರಗಳು ಕಿತ್ತು ಹೋಗಿವೆ.ಧೂಳು ಮುಕ್ತ ಗುಣಮಟ್ಟದ ರಸ್ತೆ ಅಭಿವೃದ್ಧಿ ಪಡಿಸುವಲ್ಲಿ ನೀಲನಕ್ಷೆ ಹಾಕಿಕೊಳ್ಳ ಬೇಕಿದೆ.ಶೌಚಾಲಯದ ನೀರು ಹೋರ ಹೋಗಲು ವ್ಯವಸ್ಥೆ ಇಲ್ಲದೆ ಸ್ವಚ್ಚತೆಯ ಸಮಸ್ಯೆ ಇದೆ.ಪಟ್ಟಣಕ್ಕೆ ಚರಂಡಿ ವ್ಯಸಸ್ಥೆ ನಿರ್ಮಿಸ ಬೇಕಿದೆ.

ಜನಸ್ನೇಹಿ ಪಟ್ಟಣ ಪಂಚಾಯಿತಿಯನ್ನಾಗಿಸುವ ಸವಾಲು ಸರ್ವ ಸದಸ್ಯರ ಮುಂದೆ ಇದ್ದು,ಮುಂದಿನ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿಯಾಗುವುದೇ ಎಂಬದನ್ನು ಕಾದು ನೋಡ ಬೇಕಿದೆ.

Edited By : Manjunath H D
Kshetra Samachara

Kshetra Samachara

25/11/2020 01:52 pm

Cinque Terre

61.86 K

Cinque Terre

2

ಸಂಬಂಧಿತ ಸುದ್ದಿ