ಹುಬ್ಬಳ್ಳಿ: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಕಾಲೇಜುಗಳು ಅನ್ ಲಾಕ್ ಗೆ ಸರ್ಕಾರ ನಿರ್ದೇಶನ ನೀಡಿದ ಬೆನ್ನಲ್ಲೇ ನವೆಂಬರ್.17 ರಿಂದ ಪದವಿ ಕಾಲೇಜುಗಳನ್ನು ಪ್ರಾರಂಭಿಸುವಂತೆ ಸರ್ಕಾರ ಸೂಚನೆ ನೀಡಿದೆ ಅದರೇ ಕಾಲೇಜುಗಳತ್ತ ಮಾತ್ರ ವಿದ್ಯಾರ್ಥಿಗಳು ಮುಖ ಮಾಡಿಲ್ಲ.
ಹೌದು..ಇಂದು ಕಾಲೇಜು ಆರಂಭ ಹಿನ್ನೆಲೆ,ಹುಬ್ಬಳ್ಳಿಯ ಬಹುತೇಕ ಕಾಲೇಜಗಳತ್ತ ವಿದ್ಯಾರ್ಥಿಗಳು ಮುಖ ಮಾಡಿಲ್ಲ.ಇನ್ನೂ ಕೊರೋನಾ ಭೀತಿ ಹಿನ್ನೆಲೆ ಕೊರೊನಾ ಟೆಸ್ಟ್ ಕಡ್ಡಾಯ ಮಾಡಿದ್ದು, 3 ದಿನಗಳಿಂದ ಹಬ್ಬದಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಕಾಲೇಜಿಗೆ ಬರುಲು ಹಿಂದೇಟು ಹಾಕುತ್ತಿದ್ದಾರೆ.ಕಾಲೇಜು ಬಾಗಿಲು ತೆರೆದರೂ ಖಾಲಿ ಖಾಲಿ ಹೊಡೆಯುತ್ತಿದೆ ಕಾಲೇಜಿನ ಆವರಣ.
Kshetra Samachara
17/11/2020 11:16 am