ನವಲಗುಂದ: ನವಲಗುಂದ ತಾಲೂಕಿನಾದ್ಯಂತ ನಿರಂತರ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಜನ ವಸತಿ ಪ್ರದೇಶದಲ್ಲಿ ಇರುವ ರಸ್ತೆಗಳು ಹಾಳಾಗಿ ಹೋಗಿವೆ. ಅಂತದ್ರಲ್ಲಿ ರೈತರ ಜಮೀನಿಗೆ ಸಂಪರ್ಕಿಸುವ ರಸ್ತೆಗಳ ಪರಿಸ್ಥಿತಿಯಂತೂ ಕೇಳೋದೇ ಬೇಡ ಅಂತಾರೆ ರೈತರು.
ಈ ದೃಶ್ಯ ಕಂಡು ಬಂದಿದ್ದು, ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದಲ್ಲಿನ ಜಮೀನುಗಳಿಗೆ ಸಂಪರ್ಕಿಸುವ ಒಳ ರಸ್ತೆಯಲ್ಲಿ. ಸಂಪೂರ್ಣ ಹದಗೆಟ್ಟ ಈ ರಸ್ತೆಯಲ್ಲಿ ತನ್ನ ಕೃಷಿ ಚಟುವಟಿಕೆಯನ್ನು ಮುಗಿಸಿಕೊಂಡು ಬರುತ್ತಿರುವ ರೈತನ ಪರಿಸ್ಥಿತಿ ದೇವರಿಗೇ ಪ್ರೀತಿ ಎಂಬಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಗಮನ ಹರಿಸಬೇಕು ಎಂಬುದು ರೈತರ ಅಳಲಾಗಿದೆ.
- ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
15/07/2022 09:11 pm