ಕುಂದಗೋಳ: ಕೃಷಿ ಕ್ಷೇತ್ರ ಆಧುನಿಕತೆಯತ್ತ ಸಾಗುತ್ತಿದ್ದಂತೆ ಯಂತ್ರೋಪಕರಣಗಳು ಕೃಷಿ ಕ್ಷೇತ್ರದ ಕೆಲಸವನ್ನು ಸುಲಭವಾಗಿ ಮಾಡಿದರೂ ಜಾಸ್ತಿ ಹಣ ಖರ್ಚು ಮಾಡಿ, ಕಡಿಮೆ ಉಪಯೋಗ ನೀಡುತ್ತಿವೆ. ಇದರಿಂದಾಗಿ ರೈತರ ಬದುಕು ಇದೀಗ ರಾಜ್ಯ ಹೆದ್ದಾರಿಗೆ ಬಂದು ನಿಂತಿದೆ.
ಹೌದು! ಅತಿವೃಷ್ಟಿಗೆ ಮುಂಗಾರು ಬೆಳೆ ಕಳೆದುಕೊಂಡ ರೈತರಿಗೆ ಹಿಂಗಾರು ಕೊಂಚ ಲಾಭದ ಸಿಹಿ ನೀಡಿದ್ರೂ, ಕಡಲೆ, ಗೋಧಿ, ಕುಸುಬೆ, ತೊಗರಿ ಒಕ್ಕಲು ಯಂತ್ರೋಪಕರಣಗಳ ಖರ್ಚು ಒಂದು ಗಂಟೆಗೆ ಬರೋಬ್ಬರಿ 1,800 ರೂಪಾಯಿ ಆಗಿದೆ. ಅದರಲ್ಲೂ ಪೈಪೋಟಿ ಬೇರೆ. ಈ ಕಾರಣ ಎಕರೆ, ಎರಡು ಎಕರೆ, ಕೂರಿಗೆ ಜಮೀನು ಹೊಂದಿದ ಸಣ್ಣ ರೈತರು ತಮ್ಮ ಹಿಂಗಾರು ಬೆಳೆಗಳನ್ನು ಒಕ್ಕಲು ಮಾಡಲು ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯನ್ನೇ ಆಶ್ರಿಯಿಸಿ ತಮ್ಮ ತಮ್ಮ ಕೃಷಿ ಕೆಲಸ ಆರಂಭಿಸಿದ್ದಾರೆ.
ಇತ್ತ ಲೋಕೋಪಯೋಗಿ ಇಲಾಖೆ ರಸ್ತೆ ಮೇಲೆ ಒಕ್ಕಲುತನ ಬೇಡಾ ಅಂದ್ರೂ ಲಾವಣಿ, ಕೊರ್, ಬಡ್ಡಿಯಲ್ಲಿ ಹೊಲ ಮಾಡಿದ ಭೂ ರಹಿತರಿಗೆ ಇದೀಗ ಹೆದ್ದಾರಿಯೆ ಕಣವಾಗಿದೆ.
ಒಟ್ಟಾರೆ ನಿತ್ಯ ಏರುತ್ತಿರುವ ಪೆಟ್ರೋಲ್, ಡೀಸೆಲ್, ಕೃಷಿ ಯಂತ್ರಗಳ ಬೆಲೆ ನಡುವೆ ರೈತರು ಯಂತ್ರ ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ಗರಿಷ್ಠ ಕೂಲಿ ನೀಡಲು ಹಣವಿರದೆ ಹೆದ್ದಾರಿಯಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚುವ ಒಕ್ಕಲುತನ ಆರಂಭಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
09/03/2022 06:44 pm