ಕುಂದಗೋಳ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ಮಿಸಿದ ಆರು ಸುಸಜ್ಜೀತ ಮಳಿಗೆಗಳು ವ್ಯಾಪಾರಿಗಳಿಗೆ ಗುತ್ತಿಗೆಯಾಗದೆ ಇತ್ತ ನಿರಾಶ್ರಿತರಿಗೆ ಆಸರೆಯಾಗದೆ ಹೀಗೆ ಬಾಗಿಲು ಮುಚ್ಚಿ ಹಾಳಾಗುತ್ತ ರಾತ್ರಿ ಕುಡಕರಿಗೆ ಆಶ್ರಯವಾಗಿವೆ.
ಕುಂದಗೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಪಕ್ಕ ಸಂಶಿಯಲ್ಲಿ ನಿರ್ಮಿಸಿದ ಆರು ಮಳಿಗೆಗಳಿಗೆ ಕಳೆದ 8 ತಿಂಗಳು ಹಿಂದೆ ಕೃಷಿ ಮಾರುಕಟ್ಟೆ ಸಮಿತಿ ಟೆಂಡರ್ ಆಹ್ವಾನಿಸಿದ್ರೂ, ಮಳಿಗೆಗಳು ಬಾಡಿಗೆ ವಿಚಾರವಾಗಿ ತಟಸ್ಥವಾಗಿ ಇಂದಿಗೂ ಯಾವ ವ್ಯಾಪಾರಿಗೂ ಹಂಚಿಕೆಯಾಗಿಲ್ಲಾ.
ಇನ್ನೂ ಮುಖ್ಯವಾಗಿ ಕಳೆದ ವರ್ಷ ಅತಿವೃಷ್ಟಿ ಪರಿಣಾಮ ತಾತ್ಕಾಲಿಕವಾಗಿ ಇಲ್ಲಿ ವಾಸವಿದ್ದ ನಿರಾಶ್ರಿತರನ್ನು ಮಳಿಗೆ ಟೆಂಡರ್ ಕರೆಯುವ ಮುನ್ಸೂಚನೆ ನೀಡಿ ಹೊರ ಹಾಕಿದ ತಾಲೂಕು ಆಡಳಿತ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಇತ್ತ ಆದಾಯವೂ ಇಲ್ಲದೆ ನಿರಾಶ್ರಿತರಿಗೆ ಆಶ್ರಯವಾಗದೆ ಹೀಗೆ ಪಾಳು ಬೀಳುವ ಸ್ಥಿತಿಯಲ್ಲಿವೆ.
ಒಟ್ಟಾರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಳಿಗೆಗಳು ಮುಂದಾದರೂ ಅರ್ಹ ವ್ಯಾಪಾರ ಚಟುವಟಿಕೆ ಹೊಸ ಉದ್ಯೋಗ ಅರಸುವವರಿಗೆ ನೆರವಾಗಲಿ.
Kshetra Samachara
26/11/2021 09:29 am