ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಉದ್ಘಾಟನೆ ಕಾಣದೆ ಹೊಸ ರೈತ ಸಂಪರ್ಕ ಕೇಂದ್ರ, ಇಲ್ಲಿ ಸಮಸ್ಯೆ ಕೇಳಂಗಿಲ್ಲಾ !

ಕುಂದಗೋಳ : ತಾಲೂಕಿನ ರೈತರಿಗೆ ಹೊಸ ರೈತ ಸಂಪರ್ಕ ಕೇಂದ್ರ ಭಾಗ್ಯ ಒದಗಿ ಬರೋ ಮಾತು ದಿನಾ ಕಳದ್ಹಂಗ ದೂರ ಹೊಂಟೈತಿ ನೋಡ್ರಿ, ಇಲ್ನೋಡ್ರಿ ಎಲ್ಲಾ ಪದ್ಧತ್ ಸಿರ್ ಕಾಣೋ ನೂತನ ರೈತ ಸಂಪರ್ಕ ಕೇಂದ್ರ ದ ಈ ಕಟ್ಟಡ ಯಾಕ್ ಉದ್ಘಾಟನೆ ಆಗಿಲ್ಲಾ ಅನ್ನೋದು ಬಾಳ್ ಮಂದಿ ರೈತರ್ ಪ್ರಶ್ನೇ ಐತಿ ಈಗ ಹೊಸಾ ಕಟ್ಟಡ ಸುತ್ತ್ ಕಸಾ ಬೆಳ್ಯಾಕತ್ತತಿ.

ಹೌದ್ ರೀ, ರೈತರು ಹಿಂಗ್ ಪ್ರಶ್ನೇ ಮಾಡಾಕು ಮುಖ್ಯ ಕಾರಣ ಐತಿ ಯಾಕಪ್ಪಾ ಅಂದ್ರೆ ಈ ಶತಮಾನ ಕಂಡ ಹಳೇ ಗೂಡೌನ್ ಒಯ್ದು ರೈತ ಸಂಪರ್ಕ ಕೇಂದ್ರ ಮಾಡಿ ಒಂದು ಕಡೆ ಹಿಂಗ್ ಅಧಿಕಾರಿಗಳ ಕುಂತ್ರ ಇನ್ನೋಂದು ಕಡೆ ಈ ಪಾಟಿ ಸಾಮಗ್ರಿ ತುಂಬ್ಯಾವ್, ಒಂದ್ ಸಿಸ್ಟಮೇಟಿಕ್ ಅನ್ನೋದ್ ಇಲ್ಲರೀ, ವಿಚಿತ್ರ ಏನಂದ್ರ ಈ ಹಳೇ ಕಟ್ಟಡದ ಒಳಗ ರೈತರ ಕಡತ, ದಾಖಲೆ ಸಂಗ್ರಹಿಸಿ ಇಡಾಕ್ ಕಂಪ್ಯೂಟರ್ ಆಪರೇಟರ್ ಮಾಡಾಕ ಸ್ವತಃ ಅಧಿಕಾರಿಗಳೇ ತೊಂದರೆ ಐತಿ ಆದ್ರೂ ಇಲ್ಲಿ ಮಟಾ ಯಾರಿಗೆ ಹೇಳದೆ ವ್ಯವಸ್ಥೆ ನೋಡಿ ಗಪ್ ಅದಾರ್.

ಆದ್ರ, ಇಲಿ, ಹೆಗ್ಗಣ, ಇರುವೆ, ಮಳೆ ಈ ಗೂಡೌನ್ ಕಥಿ ಕೇಳಬೇಕ್ ಅಲ್ಲ, ಅವು ಈ ಹಳೇ ರೈತ ಸಂಪರ್ಕ ಕೇಂದ್ರದಾಗ ತಾಡಪತ್ರಿ, ಗೊಬ್ಬರ, ಎಣ್ಣೆ ಪಂಪ್, ಬೀಜ ಚೀಲ ಕಡದ್ ಕಡದ್ ಹಾಳ್ ಮಾಡಾಕತ್ತಾವ್ ಅಂತ್ ಇದು ನಮಗೆ ರೈತರ್ ಹೇಳಿದ್ದ್ ಮೇಲೆ ಗೊತ್ತು.

ಕೇಳಿದ್ರಲ್ಲಾ, ಇದರ ಜೊತೆ ಈ ರೈತ ಸಂಪರ್ಕ ಕೇಂದ್ರದಾಗ ಕೆಲ್ಸಾ ಮಾಡೋ ಎಲ್ಲಾ ಅಧಿಕಾರಿಗಳು ವಿಶೇಷವಾಗಿ ಮಹಿಳಾ ಅಧಿಕಾರಿಗಳಿಗೆ ಶೌಚಾಲಯದ ಸಮಸ್ಯೆ ಐತಿ ಅವ್ರು, ಹತ್ತಿರದ ಎಡಿ ಆಪೀಸ್'ಗೆ ಹೋಗ್ತಾರ, ಅವಾಗ್ ರೈತರು ಅಧಿಕಾರಿಗಳು ಇಲ್ಲಾ ಇಲ್ಲಾ ಅಂತ್ ಗದ್ದಲ್ ಮಾಡ್ತಾರು ಇದೆಲ್ಲದಕ್ಕೂ ಪರಿಹಾರ ಅಂದ್ರೆ ಸುಸಜ್ಜೀತ ಕಟ್ಟಡ, ದಾಖಲೆ ಸಂಗ್ರಹ ಕೋಣೆ, ಬೀಜ ಗೊಬ್ಬರ ಸಾಮಗ್ರಿ ಸಂಗ್ರಹ ಹೊಸ ವ್ಯವಸ್ಥೆ ಹೊಂದಿದ ಇಲ್ನೋಡ್ರಿ ಈ ನೂತನ ರೈತ ಸಂಪರ್ಕ ಕೇಂದ್ರ ಉದ್ಘಾಟನೆ ಮಾಡಿ ರೈತರು ಮತ್ತ್ ಅಧಿಕಾರಿಗಳು ಇಬ್ರಿಗೂ ಅನುಕೂಲ ಮಾಡಿ ಕೊಡೋದು ಮಾನ್ಯ ಶಾಸಕಿ ಕುಸುಮಾವತಿ ಶಿವಳ್ಳಿಯವರೇ ಕಟ್ಟಡ ಉದ್ಘಾಟಿಸಿ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By : Manjunath H D
Kshetra Samachara

Kshetra Samachara

17/09/2021 03:04 pm

Cinque Terre

46.35 K

Cinque Terre

2

ಸಂಬಂಧಿತ ಸುದ್ದಿ