ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಪುರಸಭೆಗೆ ಲೆಕ್ಕಕ್ಕಿಲ್ಲದೆ ಹಾಳಾಗಿ ಹೋಯ್ತು ಸಾರ್ವಜನಿಕ ಶೌಚಾಲಯ

ಅಣ್ಣಿಗೇರಿ : ಬಯಲು ಶೌಚ ಮುಕ್ತಮಾಡಿ ಸ್ವಚ್ಚ ಭಾರತ ಯೋಜನೆಗೆ ಜೈಕಾರ ಹೇಳಬೇಕಿದ್ದ ಸಾರ್ವಜನಿಕ ಶೌಚಾಲಯ ಒಂದು ಸದ್ಯ ಹಂದಿಗಳ ವಾಸಸ್ಥಾನವಾಗಿ ಸುತ್ತಲೂ ಮುಳ್ಳು ಕಂಟಿಗಳು ಬೆಳೆದು ಗಬ್ಬೆದ್ದು ಹೋಗಿದೆ.

ಹೌದು ! ಅಣ್ಣಿಗೇರಿ ಪಟ್ಟಣದ ಹೊರಕೇರಿ ಓಣಿ ಯಲ್ಲಿರುವ ಪುರಸಭೆ ವ್ಯಾಪ್ತಿಯ 2007-08 ನೇ ಸಾಲಿನಲ್ಲಿ ನಿರ್ಮಿಸಿದ ಸುಸಜ್ಜಿತ ಶೌಚಾಲಯ ನಿರ್ವಹಣೆ ಕೊರತೆಯಿಂದ ಹಂದಿಗಳ ಕೊಂಪೆಯಾಗಿದ್ದು ಸುತ್ತಲೂ ಮುಳ್ಳು ಕಂಟಿಗಳು ಬೆಳೆದ ಕಾರಣ ಸಾರ್ವಜನಿಕರಿಂದ ದೂರ ಉಳಿದು ಹಾಳಾಗಿ ಹೋಗುತ್ತಿದೆ.

ಇನ್ನು ಶೌಚಾಲಯಕ್ಕೆ ನಿರ್ಮಿಸಿದ ಸೆಪ್ಟಿಕ್ ಟ್ಯಾಂಕ್ ತೆರದೆ ಇದ್ದು ಅಪಘಾತಕ್ಕೆ ಆಹ್ವಾನ ನೀಡಿದಂತಿದೆ ಈ ಬಗ್ಗೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಸ್ವಚ್ಚತೆ ವಿಷಯದಲ್ಲಿ ಕಣ್ಮುಚ್ಚಿ ಕುಳಿತಿದ್ದು ಸಾರ್ವಜನಿಕರು ಈ ಶೌಚಾಲಯ ಮರೆತಿದ್ದಾರೆ ಎಂದು ನಿರ್ವಹಣೆ ಮಾಡುವುದನ್ನೇ ಕೈ ಬಿಟ್ಟಿದ್ದಾರೆ ಮುಂದಾದರೂ ಈ ಶೌಚಾಲಯಕ್ಕೆ ಪೂರಕೆ ಭಾಗ್ಯ ಕಲ್ಪಿಸಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Nagesh Gaonkar
Kshetra Samachara

Kshetra Samachara

21/10/2020 10:21 am

Cinque Terre

21.4 K

Cinque Terre

0

ಸಂಬಂಧಿತ ಸುದ್ದಿ