ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯಾಕಾಶಿಯಿಂದ ಕುಂದಾನಗರಿಗೆ ನೇರ ರೈಲು ಮಾರ್ಗ : 927.40 ಕೋಟಿ ರೂ. ವೆಚ್ಚ, 335 ಹೆಕ್ಟೇರ್ ಭೂ ಸ್ವಾಧೀನ

ಧಾರವಾಡ : ರೈಲ್ವೆ ಇಲಾಖೆ,ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿರುವ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಯೋಜನೆಗೆ 335 ಹೆಕ್ಟೇರ್ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ನೂತನ ಮಾರ್ಗದ ಕಾಮಗಾರಿ ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆಯಲಾಗಿದೆ.

73 ಕಿ. ಮೀ. ಉದ್ದದ ಧಾರವಾಡ-ಬೆಳಗಾವಿ ಏಕಪಥ ರೈಲು ಮಾರ್ಗದ ಯೋಜನಾ ವೆಚ್ಚ ಸುಮಾರು 927.40 ಕೋಟಿ ರೂ.ಗಳು.

ನೈಋತ್ಯ ರೈಲ್ವೆ ಈ ರೈಲು ಮಾರ್ಗ ನಿರ್ಮಾಣಕ್ಕೆ 335 ಹೆಕ್ಟೇರ್ ಭೂಮಿ ಅಗತ್ಯವಿದೆ ಎಂದು ಅಂದಾಜಿಸಿದೆ.

ಈ ಕುರಿತು ವರದಿ ತಯಾರು ಮಾಡಿದ್ದು, ಭೂಮಿಯನ್ನು ಹಸ್ತಾಂತರ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಿದೆ.

ಭೂಮಿ ಹಸ್ತಾಂತರಗೊಂಡರೆ 2 ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.

ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಕೇಂದ್ರ ರೈಲ್ವೆ ಸಚಿವರಾಗಿದ್ದ ದಿ. ದಿವಂಗತ ಸುರೇಶ್ ಅಂಗಡಿ ಅವರ ಕನಸು.

ಈ ಯೋಜನೆ ಯಶಸ್ವಿಯಾದಲ್ಲಿ ಕೇವಲ 1 ಗಂಟೆಯಲ್ಲಿ ವಿದ್ಯಾಕಾಶಿಯಿಂದ ಕುಂದಾನಗರಿಯನ್ನು ತಲುಪಬಹುದಾಗಿದೆ.

Edited By : Nirmala Aralikatti
Kshetra Samachara

Kshetra Samachara

20/10/2020 01:55 pm

Cinque Terre

22.22 K

Cinque Terre

6

ಸಂಬಂಧಿತ ಸುದ್ದಿ