ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹು-ಧಾ ಮಹಾನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಕೆ ಎಲ್ಲ ವಾರ್ಡ್ ಗಳಿಗೂ 24×7 ಕುಡಿಯುವ ನೀರಿನ ಸರಬರಾಜು ಮಾಡಲು ಮುಂದಾಗಿದ್ದು, ಕುಡಿಯುವ ನೀರಿನ ಸಮಸ್ಯೆಗಳಿಗೆ ಮಹಾನಗರ ಹೊಸ ರೀತಿಯ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 26 ವಾರ್ಡ್ ಗಳಿಗೆ 24×7 ಕುಡಿಯುವ ನೀರಿನ ಸರಬರಾಜು ಮಾಡಿದ್ದು,ಇನ್ನೂ ಕೆಲವು ದಿನಗಳಲ್ಲಿ ಹು-ಧಾ ಮಹಾನಗರ 41 ವಾರ್ಡ್ ಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡಲು ಮಹಾನಗರ ಪಾಲಿಕೆ ಮುಂದಾಗುತ್ತಿದೆ.
763 ಕೋಟಿ ಮೊತ್ತದ ಯೋಜನೆಯಾಗಿದ್ದು,550 ಕೋಟಿಯನ್ನು ವರ್ಲ್ಡ್ ಬ್ಯಾಂಕ್ ನೀಡುತ್ತಿದ್ದು,213 ಕೋಟಿ ಹಣವನ್ನು ಮಹಾನಗರ ಪಾಲಿಕೆ ವ್ಯಯಿಸುವ ಮೂಲಕ ಹುಬ್ಬಳ್ಳಿ-ಧಾರವಾಡ ಮಹಾನಗರದ ಜನರಿಗೆ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಶುದ್ಧ ಕುಡಿಯುವ ನೀರು ದೊರೆಯಲಿದೆ.
ಈ ಹಿಂದೆ ಎಂಟು ವಾರ್ಡ್ ಗಳಿಗೆ ಕರ್ನಾಟಕ ಅರ್ಬನ್ ಮಾರ್ಡನೈಸೆಸನ್ ಸಂಸ್ಥೆಯಿಂದ ಮಾಡಿದ್ದು,ಉಳಿದ ವಾರ್ಡ್ ಗಳಲ್ಲಿ ಕರ್ನಾಟಕ ಡ್ರೈನೆಜ್ ಬೋರ್ಡ್ ವತಿಯಿಂದ ನೀರು ಸರಬರಾಜು ಮಾಡಲಾಗುತ್ತದೆ.
ಈಗಾಗಲೇ ನವೀಲು ತೀರ್ಥದಿಂದ 200 ಎಂ.ಎಲ್.ಡಿ ನೀರನ್ನು ತೆಗೆದುಕೊಂಡು ಬರಲಾಗುತ್ತಿದ್ದು,ಎಲ್ಲ ರೀತಿಯ ಸ್ಟೋರೇಜ್, ಓವರ್ ಹೆಡ್ ಟ್ಯಾಂಕರ್ ಮೂಲಕ ನೀರಿನ ಯಾವುದೇ ಸಮಸ್ಯೆಯಾಗದಂತೆ ಮಹಾನಗರ ಪಾಲಿಕೆ ಸೂಕ್ತ ನಿರ್ಧಾರಕ್ಕೆ ಮುಂದಾಗಿದ್ದು,ಜನನಿಬಿಡ ಪ್ರದೇಶಗಳಲ್ಲಿ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಕೆ ಮುಂದಾಗುತ್ತಿದ್ದು,ಮಹಾನಗರ ಪಾಲಿಕೆ ಎಲ್ಲಾ ವಾರ್ಡ್ ಗಳಿಗೆ 24×7 ನೀರು ಸರಬರಾಜು ಆಗಲಿದೆ.
Kshetra Samachara
16/10/2020 05:56 pm