ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ದೇಹಕ್ಕೆ ವಿಕಲತೆ, ಜೀವನಕ್ಕೆ ಆರ್ಥಿಕ ದುರ್ಬಲತೆ ಸಹಾಯವೇ ಗತಿ !

ಕುಂದಗೋಳ : ಆತ ಹುಟ್ಟು ವಿಕಲಚೇತನ ಎರಡು ನಿಮಿಷ ಬೇರೊಂದು ವಸ್ತುವಿನ ಆಸರೆ ಇಲ್ಲದೆ ನಾಲ್ಕು ಹೆಜ್ಜೆ ಇಡುವುದೇ ಕಷ್ಟ, ಇಂತಹ ಸಮಯದಲ್ಲಿ ವಿಕಲಚೇತನರ ಮಾಸಿಕ 800 ರೂಪಾಯಿ ಗೌರವ ಧನದ ಬದುಕು ಆರ್ಥಿಕ ಸುಳಿಯಲ್ಲಿ ಸಿಲುಕಿದ್ದು ಅರ್ಧಾಂಗಿಯ ಕೂಲಿ ಕೆಲಸವೇ ಅನ್ನಕ್ಕೆ ದಾರಿಯಾಗಿದೆ.

ಇಂತಹ ಕಠಿಣ ಬದುಕಿಗೆ ಇದೀಗ ವರುಣ ಆಘಾತ ತಂದಿದ್ದಾನೆ. ಸದ್ಯ ಕೂಡು ಕುಟುಂಬ ಇವರ ಮನೆ ಮಳೆಗೆ ಆಹುತಿಯಾಗಿ ಬಿದ್ದಿದ್ದು ಆಸರೆ ಇರಲಾರದೆ ಪರದಾಡಿ ಸದ್ಯ ಮನೆ ಹಿಂದೆ ಉಂಡರೆ, ಕೂರಲಾದಂತ, ಕೂತರೇ ಮಲಗಲಾರದಂತಹ ಪುಟ್ಟ ಕೋಣೆ ಇವರಿಗೆ ಆಶ್ರಯವಾಗಿದೆ.

ಸದ್ಯ ವಿಕಲಚೇತನರ ಗೌರವಧನ ಹೊರತುಪಡಿಸಿ ಬೇರೆನು ವಿಕಲಚೇತನರ ಸೌಲಭ್ಯ ಸಿಗದಾದ ಕುಂದಗೋಳ ಪಟ್ಟಣದ ರಾಜೇಸಾಬ್ ಶರೇವಾಡ ಕಷ್ಟದ ಕಥೆ ಕೇಳಿ.

ಸದ್ಯ ರಾಜೇಸಾಬ್ ಅವರು ಮೂವರು ಮಕ್ಕಳಲ್ಲಿ ಒಬ್ಬ ಮಗನಿಗೆ ದೃಷ್ಟಿ ದೋಷವಿದ್ದು, ಸರ್ಕಾರ, ಜನಪ್ರತಿನಿಧಿಗಳು, ಇಲ್ಲವೇ ಮುಕ್ತ ಮನಸ್ಸುಗಳು, ದಯಾಳು ಕೈಗಳು ಇವರ ಸಂಕಷ್ಟಕ್ಕೆ ನೆರವು ನೀಡಬಹುದು ರಾಜೇಸಾಬ್ ಶರೇವಾಡ ಸಂಪರ್ಕ ಸಂಖ್ಯೆ 7090039179 ಕರೆ ಮಾಡಿ ಸಹಾಯ ನೀಡಬಹುದು.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Nagesh Gaonkar
Kshetra Samachara

Kshetra Samachara

15/09/2022 03:51 pm

Cinque Terre

85.69 K

Cinque Terre

0

ಸಂಬಂಧಿತ ಸುದ್ದಿ