ಧಾರವಾಡ: ಆಕಸ್ಮಿಕ ಬೆಂಕಿ ತಗುಲಿ ಜಾನುವಾರು ಕಳೆದುಕೊಂಡ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತನ ಮನೆಗೆ ಶನಿವಾರ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಹೊಲದಲ್ಲಿನ ದನ ಕಟ್ಟುವ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ರೈತ ಬಸಪ್ಪ ಗಂಗೋಜಿ ಅವರ ಜಾನುವಾರುಗಳು ಸಜೀವ ದಹನಗೊಂಡಿದ್ದವು. ಈ ಹಿನ್ನೆಲೆಯಲ್ಲಿ ರೈತನ ಮನೆಗೆ ತೆರಳಿದ ಅಷ್ಟಗಿಯವರು, ರೈತನಿಗೆ ಧೈರ್ಯ ತುಂಬಿ ಅವರಿಗೆ ವೈಯಕ್ತಿಕವಾಗಿ 20 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದರು.
Kshetra Samachara
20/08/2022 02:40 pm