ಕುಂದಗೋಳ: ವ್ಯಕ್ತಿಯೊಬ್ಬ ಮಾನಸಿಕವಾಗಿ ಮನನೊಂದು ಗುರುವಾರ ಸಾಯಂಕಾಲ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಸತತ ಎರಡು ದಿನ ಕಾರ್ಯಾಚರಣೆ ನಡೆಸಿ ಶವ ಹೊರ ತೆಗೆದಿದ್ದಾರೆ.
ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಹಳೇಯ ಬಾವಿಯಲ್ಲಿ ಗುರುವಾರ ಸಾಯಂಕಾಲ ಬಾಹುಬಲಿ ಸೋಮಾಪುರ (56) ಮಾನಸಿಕವಾಗಿ ನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಗುರುವಾರ ಸಾಯಂಕಾಲ 5 ಗಂಟೆಯಿಂದ ರಾತ್ರಿ 9 ಗಂಟೆ 30 ನಿಮಿಷದವರೆಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರೂ ಮೃತ ವ್ಯಕ್ತಿಯ ಶವ ಸಿಕ್ಕಿರಲಿಲ್ಲ.
ಇಂದು ಬೆಳಿಗ್ಗೆ ಪುನಃ 8 ಗಂಟೆಯಿಂದ ಶವ ಶೋಧ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿ ಜಿ.ಬಿ.ಸಾವಂತನವರ ತಂಡ 11 ಗಂಟೆ ವೇಳೆಗೆ ಮೃತ ವ್ಯಕ್ತಿಯ ಶವವನ್ನು ಹೊರ ತೆಗೆದು ಗುಡಗೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಗ್ನಿಶಾಮಕ ದಳದ ಸತತ ಕಾರ್ಯಾಚರಣೆ ಹಾಗೂ ಗುಡಗೇರಿ ಪಿಎಸ್ಐ ದಿನೇಶ್ ಪಿ ಜವಳೇಕರ ನೇತೃತ್ವದಲ್ಲಿ ಮೃತ ವ್ಯಕ್ತಿ ಶವ ಶೋಧ ಮಾಡಲಾಗಿದೆ. ಈ ವೇಳೆ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿತ್ತು.
Kshetra Samachara
05/08/2022 01:09 pm