ಧಾರವಾಡ: ರೈತರು ಅಂದ್ರೇನೆ ಹಾಗೆ. ತಾವು ಸಾಕಿ ಜೋಪಾನ ಮಾಡಿದ ಎತ್ತುಗಳನ್ನ ಪ್ರೀತಿಯಿಂದ ಕಾಣ್ತಾರೆ. ಅಷ್ಟೇ ಅಲ್ಲ ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲೊಂದು ವಿಭಿನ್ನ ಬರ್ತಡೇ ನಡೆದಿದೆ.
ಹೌದು! ಸಿಂಗಾರಗೊಂಡ ಎತ್ತಿನ ಮುಂದೆ ಕೇಕ್ ಕತ್ತರಿಸುತ್ತಿರುವ ಇವರೆಲ್ಲ ದೇವರಹುಬ್ಬಳ್ಳಿ ಗ್ರಾಮದವರು. ಈ ಗ್ರಾಮದ ನಾಗರಾಜ ಎಂಬ ರೈತ ಕಳೆದ ಮೂರು ವರ್ಷಗಳಿಂದ ತಮ್ಮ ಎತ್ತಿನ ಜನ್ಮ ದಿನ ಆಚರಿಸುತ್ತ ಬಂದಿದ್ದಾರೆ.
ಈ ಎತ್ತನ್ನು ಮೂರು ವರ್ಷಗಳ ಹಿಂದೆ ನಾಗರಾಜ ಮಾರಾಟ ಮಾಡಿದ್ರಂತೆ. ಹೀಗೆ ಮಾರಾಟ ಮಾಡಲಾಗಿದ್ದ ಎತ್ತು ಮುಂದೊಂದು ದಿನ ಧಾರವಾಡ ಮಾರುಕಟ್ಟೆಯಲ್ಲಿ ತನ್ನ ಮಾಲೀಕನನ್ನು ಕಂಡು ಮೂಕ ಧ್ವನಿಯಲ್ಲೇ ಆತನನ್ನು ಕರೆದದ್ದು ಅಚ್ಛರಿಯ ಸಂಗತಿ. ಮರಳಿ ಮಾಲೀಕ ಆ ಎತ್ತನ್ನು ಖರೀದಿ ಮಾಡಿಕೊಂಡು ಬಂದು ಅಂದಿನಿಂದ ಅದರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತ ಬಂದಿದ್ದಾನೆ.
ಗುರುವಾರ ಕೂಡ ಈ ರೈತ ತನ್ನ ಮನೆ ಮುಂದೆ ಸಂಭ್ರಮದಿಂದಲೇ ಎತ್ತಿನ ಜನ್ಮ ದಿನ ಆಚರಿಸಿದ್ದಾನೆ. ಊರಿನವರೆಲ್ಲರೂ ಕೇಕ್ ಕತ್ತರಿಸಿ ಎತ್ತಿಗೆ ತಿನ್ನಿಸುವ ಮೂಲಕ ಸಂಭ್ರಮಿಸಿದ್ದಾರೆ.
Kshetra Samachara
30/06/2022 09:30 pm