ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: "ಆಹಾರ ಹಾಳು ಮಾಡದಿರಿ; ಹಸಿವಿನಿಂದ ಉಸಿರು ಚೆಲ್ಲಿದ ಜೀವ ನೆನಪಿಸಿಕೊಳ್ಳಿ"

ಕುಂದಗೋಳ: ಹೀಗೆ ಕರಪತ್ರ ಹಿಡಿದುಕೊಂಡು ಹೋಟೆಲ್, ಅಂಗಡಿ, ಬೇಕರಿಗಳಿಗೆ ಭೇಟಿ ನೀಡುತ್ತಿರುವ ಈ ವ್ಯಕ್ತಿ ಇಂದಿನ ದಿನದ ವಿಶೇಷ ಅಂದ್ರೆ ಜೂನ್ 7ರ ʼವಿಶ್ವ ಆಹಾರ ಸುರಕ್ಷತಾʼ ದಿನದ ಮಹತ್ವ ತಿಳಿಸುತ್ತಿದ್ದಾರೆ.

ಹೌದು, ಕುಂದಗೋಳ ಪಟ್ಟಣದಲ್ಲಿ ಸದಾ ಒಂದಿಲ್ಲೊಂದು ಸಮಾಜಸೇವೆ ಮಾಡುತ್ತಿರುವ ಮಂಜುನಾಥ ಯಂಟ್ರೂವಿ ಎಂಬವರು ʼವಿಶ್ವ ಆಹಾರ ಸುರಕ್ಷತಾʼ ದಿನದ ಅಂಗವಾಗಿ ಆಹಾರವನ್ನು ಹಾಳು ಮಾಡದಂತೆ ಹಾಗೂ ಊಟದ ತಟ್ಟೆಯಲ್ಲಿ ಆಹಾರ ಬಿಟ್ಟು ಕೈ ತೊಳೆಯದಂತೆ ಹೋಟೆಲ್ ಗಳಿಗೆ ತೆರಳಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಅಲ್ಲದೆ, ಹೋಟೆಲ್‌- ಅಂಗಡಿ- ಬೇಕರಿ ಮಾಲೀಕರಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ನೀಡುವಂತೆ ಮನವಿ ಮಾಡಿ, ಆಹಾರ ಹಾಳು ಮಾಡದಂತೆ ತನ್ನ ದುಡಿಮೆಯ ಹಣದಲ್ಲಿಯೇ ಕರಪತ್ರ ಮುದ್ರಿಸಿ ಹಂಚುತ್ತಿದ್ದಾರೆ. ಈ ಜಾಗೃತ ವ್ಯಕ್ತಿಯ ಸಾಮಾಜಿಕ ಕಳಕಳಿ ಜನಮೆಚ್ಚುಗೆಗೆ ಪಾತ್ರವಾಗಿದೆ.

Edited By : Nagesh Gaonkar
Kshetra Samachara

Kshetra Samachara

07/06/2022 10:24 pm

Cinque Terre

50.26 K

Cinque Terre

1

ಸಂಬಂಧಿತ ಸುದ್ದಿ