ಧಾರವಾಡ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆಗೆ ಸ್ಪಂದಿಸದೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರೂ ಹೇಳಿದ್ದರು. ಇಂದು ಮೃತ ದೇಹವನ್ನು ಮನೆಗೆ ತರುವ ವೇಳೆಯೇ ಆ ವ್ಯಕ್ತಿ ಎಚ್ಚರಗೊಂಡ ಆಶ್ಚರ್ಯಕರ ಘಟನೆ ಧಾರವಾಡದ ಕಮಲಾಪುರದಲ್ಲಿ ಶನಿವಾರ ನಡೆದಿದೆ.
ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಆತನ ಅಂತ್ಯ ಸಂಸ್ಕಾರಕ್ಕೆ ಚಿತೆಯನ್ನೂ ಸಿದ್ಧಪಡಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಆತನಿಗೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆಯನ್ನೂ ನೀಡಲಾಗಿತ್ತು. ವೈದ್ಯರು ಕೂಡ ಆತ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಿದ್ದರು. ಸಂಜೆ ವೇಳೆಗೆ ಮೃತ ದೇಹ ತರುತ್ತಿರುವಾಗ ಮೃತಪಟ್ಟ ವ್ಯಕ್ತಿ ಏಕಾಏಕಿ ಎದ್ದು ವಾಂತಿ ಮಾಡಿಕೊಂಡಿದ್ದಾನೆ. ಇದರಿಂದ ಕೆಲ ಕಾಲ ಜನ ಗಾಬರಿಗೊಂಡ ಘಟನೆಯೂ ನಡೆಯಿತು. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ರವಾನೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಜನ ಎಂದು ಆತನ ಮನೆ ಎದುರು ಜನ ಜಮಾಯಿಸಿ, ಚಿತೆ ಕೂಡ ರೆಡಿ ಮಾಡಿದ್ದರು. ವಿಷಯ ತಿಳಿದ ಕೂಡಲೇ ಜನ ಕಕ್ಕಾಬಿಕ್ಕಿಯಾದ ಪ್ರಸಂಗವೂ ನಡೆದಿದೆ.
Kshetra Samachara
21/05/2022 10:46 pm