ಹುಬ್ಬಳ್ಳಿ: ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಫೆ.16 ರಂದು ನಿಧನರಾಗಿರುವುದಕ್ಕೆ ಹಿರಿಯ ಸಾಹಿತಿ ಬಿದರಕುಂದಿ ಸಂತಾಪ ಸೂಚಿಸಿದ್ದಾರೆ.
ಕಣವಿ ಒಬ್ಬ ಭಾವಜೀವಿಯಾಗಿದ್ದರು. ಸಾನೆಟ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. 250 ಕ್ಕೂ ಹೆಚ್ಚು ಸುನೀತಗಳನ್ನು ಬರೆದಿದ್ದರು. ಪ್ರಕೃತಿ ವರ್ಣನೆ ಮತ್ತು ಮನುಷ್ಯರ ಜೀವನದ ವರ್ಣನೆಯನ್ನು ತಮ್ಮ ಸಾಹಿತ್ಯದಲ್ಲಿ ಬಿಂಬಿಸುತ್ತಿದ್ದರು.
ಕಾವ್ಯಾಕ್ಷಿ ಕೃತಿಯಿಂದ ಹಿಡಿದು ಎರಡು ದಡ ಕೃತಿವರೆಗೂ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಶಾಮಸುಂದರ ಬಿದರಕುಂದಿ ಹೇಳಿದರು.
Kshetra Samachara
17/02/2022 05:28 pm