ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತಿಗೆ ವಿಧಿ, ವಿಧಾನಗಳೊಂದಿಗೆ ವಿದಾಯ ಹೇಳಿದ ರೈತ

ಧಾರವಾಡ: 12ನೇ ಶತಮಾನದ ಶರಣ ಸಾಮಾಜಿಕ ಸಮಾನತೆ ಹರಿಕಾರರು ಜಗಜ್ಯೋತಿ ಬಸವಣ್ಣನವರ ಬಗ್ಗೆ ಹಾಗೂ ತನ್ನೊಂದಿಗೆ ದಿನ ರೈತರ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ಬಸವ ಎಂದೇ ಗೌರವಿಸುತ್ತಾರೆ ಆದರೆ ಈ ಮುಗ್ಧ ಮನಸ್ಸುಗಳ ಆಳದಲ್ಲಿ ಬೇರೂರಿರುವ ಎತ್ತು ಹಾಗೂ ಬಸವಣ್ಣನವರ ಬಗ್ಗೆ ಅಪಾರವಾದ ಪ್ರೀತಿ ಗೌರವ ಭಕ್ತಿಯಿಂದ ಪೂಜಿಸುವುದನ್ನು ಇಂದಿಗೂ ಹಳ್ಳಿಗಳಲ್ಲಿ ಕಾಣಬಹುದು ಅದೇ ರೀತಿಯಾಗಿ ಧಾರವಾಡ ನಗರದ ಕಮಲಾಪುರದಲ್ಲಿ ಹತ್ತಾರು ವರ್ಷಗಳಿಂದ ಯಲ್ಲಪ್ಪ ಸವಣೂರು ಎಂಬವವರ ಮನೆಯಲ್ಲಿ ಎತ್ತೊಂದು ಅವರ ಹೆಗಲಿಗೆ ಹೆಗಲಾಗಿ ದುಡಿದು ಅನಾರೋಗ್ಯದಿಂದ ಪ್ರಾಣ ಕಳೆದುಕೊಂಡಿದೆ.

ದೇವರಿಗಿಂತ ಹೆಚ್ಚಾಗಿ ಪೂಜಿಸುವ ಎತ್ತನ್ನು ಕಳೆದುಕೊಂಡ ರೈತನಿಗೆ ದಿಗ್ಭ್ರಮೆಯಾದಂತಾಗಿದೆ. ರೈತನ ಬಾಳಿಗೆ ಬೆಳಕಾಗಿದ್ದ ಎತ್ತು ಬಿಟ್ಟು ಹೋದಾಗ ಆಗುವ ದುಃಖವೇ ಬೇರೆ. ಯಲ್ಲಪ್ಪ ಸವಣೂರು ತಾನು ದೇವರಂತೆ ಪೂಜಿಸುತ್ತ ಬಂದಿದ್ದ ಆ ಎತ್ತನ್ನು ಸಂಪ್ರದಾಯದಂತೆ ಪೂಜಿಸಿ, ಅಂತಿಮಯಾತ್ರೆಗೆ ಕಳುಹಿಸಿಕೊಟ್ಟಿದ್ದಾನೆ. ತನ್ನ ಮನೆಯ ಮುಂದೆ ಎತ್ತನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ ವಿಧಿ ವಿಧಾನದೊಂದಿಗೆ ತನ್ನೊಂದಿಗೆ ಹೆಗಲು ಕೊಟ್ಟು ದುಡಿದ ಎತ್ತಿಗೆ ವಿದಾಯ ಹೇಳಿದ್ದಾನೆ.

Edited By : Shivu K
Kshetra Samachara

Kshetra Samachara

15/02/2022 11:23 am

Cinque Terre

13.86 K

Cinque Terre

1

ಸಂಬಂಧಿತ ಸುದ್ದಿ