ಕುಂದಗೋಳ: ತಮ್ಮ ವಿಭಿನ್ನ ಪ್ರಯತ್ನ ಶ್ರಮದಾನದ ಮೂಲಕ ಹೊಸ ಹೊಸ ಕಾರ್ಯಕ್ರಮ ನೀಡುವ ರೆವಲ್ಯೂಷನ್ ಟೀಂ ಇಂದು ಮತ್ತೊಂದು ಬಣ್ಣ ಬಣ್ಣದ ಕಾಯಕದ ಮೂಲಕ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ್ದಾರೆ.
ರೆವಲ್ಯೂಷನ್ ಟೀಂ ಐವತ್ತಕ್ಕೂ ಹೆಚ್ಚು ಸ್ವಯಂ ಸೇವಕರು ಬಣ್ಣ ಮಾಸಿದ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಸರ್ಕಾರಿ ಶಾಲೆಯನ್ನು ಆಯ್ಕೆಮಾಡಿಕೊಂಡು ಕಳೆದೆರೆಡು ದಿನಗಳಿಂದ ಬಣ್ಣದ ಜೊತೆ ಮಕ್ಕಳ ಆಸಕ್ತಿ ಕೆರಳಿಸುವ ವೈವಿಧ್ಯಮಯ ಚಿತ್ರ ಹಾಗೂ ಪ್ರೇರಣಾತ್ಮಕ ವಾಕ್ಯ ಬರೆದಿದ್ದಾರೆ.
ರೆವಲ್ಯೂಷನ್ ಟೀಂ ಈ ಕಾರ್ಯಕ್ಕೆ ಚಾಕಲಬ್ಬಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸ್ಥರು ವಿಶೇಷ ಸಹಕಾರ ಸನ್ಮಾನ ಆತಿಥ್ಯ ನೀಡಿ ಸಹಕರಿಸಿದ್ದಾರೆ. ಒಟ್ಟಾರೆ ಸರ್ಕಾರಿ ಶಾಲೆಯಿಂದ ದೂರವಿರುವ ಮಕ್ಕಳನ್ನು ತಮ್ಮ ವಿಭಿನ್ನ ಪ್ರಯತ್ನದ ಮೂಲಕ ಶಾಲೆ ಸೇರಿಸುವ ಕೆಲಸವನ್ನು ರೆವಲ್ಯೂಷನ್ ಟೀಂ ಮಾಡುವಲ್ಲಿ ಪ್ರಸಕ್ತ ದಿನಗಳಲ್ಲಿ ಮುಂಚೂಣಿಯಲ್ಲಿದೆ.
Kshetra Samachara
10/10/2021 08:59 pm