ನವಲಗುಂದ : ಅನಾರೋಗ್ಯದಿಂದ ಮೃತಪಟ್ಟ ಎ ಎಸ್ ಐ ಸಿ.ಬಿ ಹಿರೇಗೌಡರ್ ಅವರಿಗೆ ನವಲಗುಂದ ತಾಲೂಕಿನ ಖನ್ನೂರ ಗ್ರಾಮದಲ್ಲಿನ ಅವರ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಮೂಲತಃ ನವಲಗುಂದ ತಾಲೂಕಿನ ಖನ್ನೂರ ಗ್ರಾಮದವರಾದ ಸಿ.ಬಿ ಹಿರೇಗೌಡರ್ ಗದಗ, ಗಜೇಂದ್ರಗಡ ಠಾಣೆ ಸೇರಿದಂತೆ ಸದ್ಯ ನರಗುಂದ ಪೋಲೀಸ್ ಠಾಣೆಯಲ್ಲಿ ಎ ಎಸ್ ಐ ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಇನ್ನು ಆರು ವರ್ಷ ಕರ್ತವ್ಯ ನಿರ್ವಹಿಸಬೇಕಿತ್ತು, ಆದರೆ ಕೆಳೆದು ಎರಡು ತಿಂಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನಿನ್ನೆ ಸಾಯಂಕಾಲ ಮೃತ ಪಟ್ಟಿದ್ದು, ಅವರ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನರಗುಂದ ಪೋಲೀಸ್ ಠಾಣೆಯ ಸಿ.ಪಿ.ಐ ನಂದಿಶ್ವರ ಕುಂಬಾರ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
Kshetra Samachara
31/08/2021 09:28 pm