ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಾರಥಿ ಇಲ್ಲದೇ ಉಳವಿಯತ್ತ ಹೊರಟ ಜೋಡೆತ್ತುಗಳು

ಧಾರವಾಡ: ಚಕ್ಕಡಿ ತೆಗೆದುಕೊಂಡು ಹೋಗಿ ಉಳವಿ ಜಾತ್ರೆ ಮಾಡುವುದೇ ಒಂದು ಖುಷಿ. ಚಕ್ಕಡಿ ಹೂಡಿಕೊಂಡು ಮುರ್ನಾಲ್ಕು ದಿನಗಟ್ಟಲೇ ಪ್ರಯಾಣ ಮಾಡಿ ಉಳವಿ ಜಾತ್ರೆ ಮಾಡುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ. ಈಗಾಗಲೇ ಉಳವಿ ಜಾತ್ರೆ ಆರಂಭವಾಗಿದ್ದು, ಅನೇಕರು ಚಕ್ಕಡಿ, ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಧಾರವಾಡದ ಮಾಳಾಪುರದ ರೈತರೊಬ್ಬರಿಗೆ ಸೇರಿದ ಜೋಡೆತ್ತುಗಳು ತಾವೇ ಉಳವಿಗೆ ಹೋಗುವ ಮೂಲಕ ಗಮನಸೆಳೆದಿವೆ.

ಎತ್ತುಗಳು ತಾವೇ ಉಳವಿಗೆ ಹೋಗಿವೆಯಾ ಎಂದು ಪ್ರಶ್ನಿಸಬೇಡಿ. ನಿನ್ನೆ ಧಾರವಾಡದ ಮಾಳಾಪುರದಿಂದ ಎತ್ತುಗಳಿಗೆ ಚಕ್ಕಡಿ ಹೂಡಿ ಬಿಡಲಾಗಿದೆ. ಅವುಗಳ ಹಿಂದೆ ಮಾಲೀಕರು ಕೂಡ ಹೋಗಿದ್ದಾರೆ. ಚಕ್ಕಡಿ ಹೊಡೆಯುವವರು ಯಾರೂ ಇಲ್ಲದೇ ಎತ್ತುಗಳಷ್ಟೇ ಉಳವಿಗೆ ಹೋಗಿ ತಲುಪಿವೆ. ಈ ವೀಡಿಯೋವನ್ನು ಸಾಮಾಜಿಕ

ಜಾಲತಾಣದಲ್ಲಿ ಹರಿಬಿಡಲಾಗದ್ದು, ಸಖತ್ ವೈರಲ್ ಆಗಿದೆ.

Edited By : Manjunath H D
Kshetra Samachara

Kshetra Samachara

27/02/2021 02:39 pm

Cinque Terre

34.21 K

Cinque Terre

12

ಸಂಬಂಧಿತ ಸುದ್ದಿ