ಕುಂದಗೋಳ : ಭಾರತಾಂಬೆ ಮಡಿಲಲ್ಲಿ ನಾವೆಲ್ಲರೂ ಇಷ್ಟು ಸುರಕ್ಷಿತವಾಗಿ ಸಹಬಾಳ್ವೆ ನಡೆಸಲು ಚಳಿ, ಮಳೆ, ಗಾಳಿ ಲೆಕ್ಕಿಸದೆ ಗಡಿಯಲ್ಲಿ ನಿಂತು ಕಾಯಕ ಮಾಡುವ ಯೋಧರೆ ಮುಖ್ಯ ಕಾರಣ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ವಾಗೀಶ ಗಂಗಾಯಿ ಹೇಳಿದರು.
ಅವರು ಸತತ 17 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದು ಸ್ವ ಗ್ರಾಮಕ್ಕೆ ಮರಳಿದ ಯೋಧ ಪರಮೇಶ್ವರ್ ಭೈರಪ್ಪನವರಿಗೆ ವಾರ್ಡ್ 19ರಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಯೋಧ ಪರಮೇಶ್ವರ್ ಮಾತನಾಡಿ ತಾಯ್ನಾಡಿಗೆ ನಾವು ಸೇವೆ ಸಲ್ಲಿಸುವಾಗ ನಮ್ಮ ಬೆನ್ನು ಹಿಂದೆ ಇರುವ ದೇಶದ ರಕ್ಷಣೆಯಷ್ಟೇ ನಮಗೆ ಮುಖ್ಯ, ಅಂತಹ ಸೇವೆಗೆ ನೀವು ನೀಡುವ ಗೌರವ ನಮಗೆ ಸಂತಸ ತಂದಿದೆ ಎಂದರು.
ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಶ್ಯಾಮಸುಂದರ್ ದೇಸಾಯಿ, ಬಸಮ್ಮ ಓಂ ಪ್ರಕಾಶ್ ಕಟಗಿ, ಭೀಮಪ್ಪ ಬೋವಿ, ಪ್ರಕಾಶ್ ಕಟಗಿ ಉಪಸ್ಥಿತರಿದ್ದರು ರವಿ ಕಮಡೊಳ್ಳಿ ಯೋಧರನ್ನು ಸ್ವಾಗತಿಸಿ ಸನ್ಮಾನ ಮಾಡಿದರು.
Kshetra Samachara
02/02/2021 11:40 am